ಕ್ರೀಡೆ

ಕೆಎಸ್ ಸಿಎ ಡಬಲ್ ಧಮಾಕ

ಪ್ರತಿಷ್ಠಿತ ಕೆ. ತಿಮ್ಮಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಕೆಎಸ್ ಸಿಎ ಇಲೆವೆನ್ ತಂಡ ಹಾಗೂ ಕೆಎಸ್ ಸಿಎ ಅಧ್ಯಕ್ಷರ ಇಲೆವೆನ್ ತಂಡಗಳು ಗೆಲುವು ...

ಕೆಎಸ್ ಸಿಎ ಡಬಲ್ ಧಮಾಕ
ಕೆಎಸ್ ಸಿ ಎ ಲೋಗೋ
Published On :

ಆಲೂರು (ಬೆಂಗಳೂರು): ಪ್ರತಿಷ್ಠಿತ ಕೆ. ತಿಮ್ಮಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಕೆಎಸ್ ಸಿಎ ಇಲೆವೆನ್ ತಂಡ ಹಾಗೂ ಕೆಎಸ್ ಸಿಎ ಅಧ್ಯಕ್ಷರ ಇಲೆವೆನ್ ತಂಡಗಳು ಗೆಲುವು ದಾಖಲಿಸಿವೆ. ಶನಿವಾರ ಮುಕ್ತಾಯಗೊಂಡ ನಾಲ್ಕು ದಿನಗಳ ಪಂದ್ಯದಲ್ಲಿ ಕೆಎಸ್ಸಿಎ ಇಲೆವೆನ್ ತಂಡ, ಹಿಮಾಚಲ ಪ್ರದೇಶವನ್ನು 175 ರನ್ ಗಳ ಅಂತರದಿಂದ ಸೋಲಿಸಿತು. ಪಂದ್ಯದಲ್ಲಿ ಗೆಲುವಿಗಾಗಿ 382 ರನ್ ಗಳ ಬೃಹತ್ ಸವಾಲು ಪಡೆದ ಹಿಮಾಚಲ ಪ್ರದೇಶ ತಂಡ, ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ 207ಕ್ಕೆ ಆಲೌಟ್ ಆಯಿತು. ಈ ಪಂದ್ಯದಲ್ಲಿನ ಜಯದ ಮೂಲಕ, ಕೆಎಸ್ ಸಿಎ ಇಲೆವೆನ್ ತಂಡ 6 ಅಂಕಗಳನ್ನು ತನ್ನದಾಗಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್: ಕೆಎಸ್ ಸಿಎ ಇಲೆವೆನ್ 382 ಮತ್ತು 247; ಹಿಮಾಚಲ ಪ್ರದೇಶ 247 ಮತ್ತು ದ್ವಿತೀಯ ಇನಿಂಗ್ಸ್ 207 (ಅ ಮಿತ್ ಕುಮಾ ರ್ 56, ಆಕಾಶ್ 38; ಎಚ್ ಎಸ್ ಶರತ್ 37ಕ್ಕೆ 3).
ಅಧ್ಯಕ್ಷರ ತಂಡಕ್ಕೆ ಜಯ: ಆಲೂರು 2 ಮೈದಾನದಲ್ಲಿ ಮುಕ್ತಾಯಗೊಂಡ ಮತ್ತೊಂದು ಪಂದ್ಯದಲ್ಲಿ ಕೆಎಸ್ಸಿ ಎ ಅಧ್ಯಕ್ಷರ ಇಲೆವೆನ್ ತಂಡ, ತ್ರಿಪುರಾ ಕ್ರಿಕೆಟ್ ಸಂಸ್ಥೆ ತಂಡದ ವಿರುದ್ಧ ಇನಿಂಗ್ಸ್ ಹಾಗೂ 137 ರನ್‍ಗಳ ಗೆಲುವು ದಾಖಲಿಸಿತು. ಈ ಜಯದಿಂದ ಕೆಎಸ್ ಸಿಎ ಇಲೆವೆನ್‍ಗೆ 7 ಅಂಕ ಸಿಕ್ಕಿವೆ.
ಸಂಕ್ಷಿಪ್ತ ಸ್ಕೋರ್: ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ಮೊದಲ ಇನಿಂಗ್ಸ್ 613; ತ್ರಿಪುರಾ 264 ಮತ್ತು ದ್ವಿತೀಯ ಇನಿಂಗ್ಸ್ 212ಕ್ಕೆ ಆಲೌಟ್ (ಬಂಟಿ ರಾಯ್ 61, ಕೌಶಲ್ 52; ಕೆ. ಗೌತಮ್ 73ಕ್ಕೆ 4).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.