ಕ್ರೀಡೆ

ಈಜು: ಕರ್ನಾಟಕ ಸಮಗ್ರ ಚಾಂಪಿಯನ್

ಜೂನಿಯರ್ ಹಾಗೂ ಸಬ ಜೂನಿಯರ್ ವಿಭಾಗದಲ್ಲಿ ರಾಜ್ಯದ ಈಜುಪಟುಗಳ ಅತ್ಯುತ್ತಮ ಪ್ರದರ್ಶನದ ಪರಿಣಾಮ ಕರ್ನಾಟಕ 42 ನೇ ಜೂನಿಯರ್ ಮತ್ತು 32 ನೇ ಸಬ್ ಜೂನಿಯರ್ ಈಜು ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಈಜು: ಕರ್ನಾಟಕ ಸಮಗ್ರ ಚಾಂಪಿಯನ್
ಈಜು ಚಾಂಪಿಯನ್ ಶಿಪ್(ಸಾಂದರ್ಭಿಕ ಚಿತ್ರ)
Published On :

ಪುಣೆ: ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ರಾಜ್ಯದ ಈಜುಪಟುಗಳ ಅತ್ಯುತ್ತಮ ಪ್ರದರ್ಶನದ ಪರಿಣಾಮ ಕರ್ನಾಟಕ 42 ನೇ ಜೂನಿಯರ್ ಮತ್ತು 32 ನೇ ಸಬ್ ಜೂನಿಯರ್ ಈಜು ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಜೂನಿಯರ್ ವಿಭಾಗದಲ್ಲಿ ಕರ್ನಾಟಕ 543 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡರೆ, ಸಬ್ ಜೂನಿಯರ್ ವಿಭಾಗದಲ್ಲಿ ರಾಜ್ಯ ತಂದ 320 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಎರಡು ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಂತಿಮ ದಿನದ ಸ್ಪರ್ಧೆಗಳಲ್ಲಿ ಬಾಲಕರ 100 ಮಿ. ಫ್ರೀಸ್ಟೈಲ್ ನಲ್ಲಿ ಸಂಜಯ್ ಸಿ.ಜೆ(55 .47 ಸೆ) ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ 200  ಮಿ. ಬಟರ್ ಪ್ಲೈ ವಿಭಾಗದಲ್ಲಿ (2 :17 .೨೯) ಅಗ್ರಸ್ಥಾನ ಪಡೆದಿದ್ದಾರೆ. 100 ಮಿ.  ಫ್ರೀಸ್ಟೈಲ್ ನಲ್ಲಿ ಪ್ರಸಿದ್ಧ ಕೃಷ್ಣ(1 :01  : 21 ನಿ), 50 ಮೀ ಫ್ರೀಸ್ಟೈಲ್ ನಲ್ಲಿ ಶೋಹನ್ ಗಂಗೂಲಿ(30 .95  ) ಮೊದಲಿಗರಾದರು.

ಬಾಲಕಿಯರ ವಿಭಾಗದಲ್ಲಿ 100 ಮೀ. ಫ್ರೀಸ್ಟೈಲ್ ನಲ್ಲಿ ಖುಷಿ ದಿನೇಶ್ ಅಗ್ರಸ್ಥಾನ ಪಡೆದರೆ ಸ್ಮೃತಿ ಮಹಲಿಂಗಮ್ ದ್ವಿತೀಯ ಸ್ಥಾನ ಪಡೆದರು. ವೈಯಕ್ತಿಕ ವಿಭಾಗಗಳ ಪೈಕಿ 4 ಗುಂಪುಗಳ ಪೈಕಿ ಮೂರು ಗುಂಪಿನಲ್ಲಿ ಕರ್ನಾಟಕದ  ಲಿಖಿತ್ ಎಸ್.ಪಿ ಸಂಜಯ್ ಸಿ.ಜೆ ಶೋಹನ್ ಗಂಗೂಲಿ ಅತ್ಯುತ್ತಮ ಈಜುಪಟು ಪ್ರಶಸ್ತಿ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.