ಕ್ರೀಡೆ

ಭಾರತದ ಡಬಲ್ ಫಾಲ್ಟ್!

ಇತ್ತೀಚೆಗಷ್ಟೇ ಮುಕ್ತಾಯ ಕಂಡ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿ ಗಮನ ಸೆಳೆದಿದ್ದ ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ನ್ಯೂಜಿಲೆಂಡ್ ವಿರುದ್ಧ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಮುಗ್ಗರಿಸಿದ್ದಾರೆ...

ಭಾರತದ ಡಬಲ್ ಫಾಲ್ಟ್!
ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ರೋಹನ್ ಬೋಪಣ್ಣ ಮತ್ತು ಸಾಕೇತ್ ಮೈನೇನಿ
Published On :

ಕ್ರೈಸ್ಟ್‍ಚರ್ಚ್: ಇತ್ತೀಚೆಗಷ್ಟೇ ಮುಕ್ತಾಯ ಕಂಡ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿ ಗಮನ ಸೆಳೆದಿದ್ದ ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ನ್ಯೂಜಿಲೆಂಡ್ ವಿರುದ್ಧ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಮುಗ್ಗರಿಸಿದ್ದಾರೆ.

ಇಲ್ಲಿನ ವಿಲ್ಡಿಂಗ್ ಟೆನಿಸ್ ಕೋರ್ಟ್ ಒಳಾಂಗಣದಲ್ಲಿ ನಡೆಯುತ್ತಿರುವ ಏಷ್ಯಾ ಒಷೇನಿಯಾ ಟೆನಿಸ್ ಪಂದ್ಯಾವಳಿಯ ಎರಡನೇ ದಿನವಾದ ಶನಿವಾರದಂದು ಪುರುಷರ ಡಬಲ್ಸ್ ವಿಭಾಗದ ಪಂದ್ಯ ಭಾರತಕ್ಕೆ ಎರವಾಯಿತು. ರೋಹನ್ ಬೋಪಣ್ಣ ಹಾಗೂ ಸಾಕೇತ್ ಮೈನೇನಿ ಜೋಡಿ ನ್ಯೂಜಿಲೆಂಡ್‍ನ ಮಾರ್ಕುಸ್ ಡೇನಿಯಲ್ ಹಾಗೂ ಆರ್ಟೆಮ್ ಸಿಟಾಕ್ ಜೋಡಿಯ ಎದುರು ನೀರಸ ಪ್ರದರ್ಶನ ನೀಡಿ 3-6, 6-7, 3-6ರ ಮೂರು ನೇರ ಸೆಟ್ ಗಳಲ್ಲಿ ಸೋಲುಂಡಿತು. ತವರು ಅಭಿಮಾನಿಗಳ ಸಮ್ಮುಖದಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ ಕಿವೀಸ್ ಜೋಡಿ ಪಂದ್ಯದಾದ್ಯಂತ ಪಾರಮ್ಯ ಮೆರೆಯಿತು. ಈ ಗೆಲುವಿನಿಂದಾಗಿ ಭಾರತ 1-2ರ ಹಿನ್ನಡೆ ಅನುಭವಿಸಿದ್ದು ಒತ್ತಡಕ್ಕೆ ಸಿಲುಕಿದೆ.

ನ್ಯೂಜಿಲೆಂಡ್ ಕೇವಲ ಒಂದು ಪಂದ್ಯದಲ್ಲಿ ಜಯ ಸಾ„ಸಿದರೆ ಡೇವಿಸ್ ಕಪ್‍ನ ವಿಶ್ವ ಗುಂಪು ಪ್ಲೇಆಫ್ ಗೆ ಪ್ರವೇಶ ಪಡೆಯಲು ಈ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಲೇಬೇಕಿರುವ ಭಾರತಕ್ಕೆ ಭಾನುವಾರ ನಡೆಯಲಿರುವ ಎರಡು ರಿವರ್ಸ್ ಸಿಂಗಲ್ಸ್ ಪಂದ್ಯಗಳು ಮಹತ್ವಪೂರ್ಣವೆನಿಸಿವೆ. ಆದರೆ ಆತಿಥೇಯ ನ್ಯೂಜಿಲೆಂಡ್ ಮಾತ್ರ ಒತ್ತಡ ರಹಿತವಾಗಿ ಸೆಣಸುವ ಅವಕಾಶ ಪಡೆದುಕೊಂಡಿದೆ. ಕೇವಲ ಒಂದೇ ಒಂದು ಪಂದ್ಯವನ್ನು ಗೆದ್ದರೂ, ಅದು ವಿಶ್ವ ಪ್ಲೇಆಫ್  ಗೆ ಸ್ಥಾನ ಪಡೆಯುವುದು ಖಾತ್ರಿಯಾಗುತ್ತದೆ. ಈ ದಿಸೆಯಲ್ಲಿ ಭಾರತದ ಆಟಗಾರರಿಗೆ ರಿವರ್ಸ್ ಸಿಂಗಲ್ಸ್ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಅಂದಹಾಗೆ ಭಾನುವಾರ ನಡೆಯಲಿರುವ ಎರಡು ರಿವರ್ಸ್ ಸಿಂಗಲ್ಸ್ ಪಂದ್ಯಗಳಲ್ಲಿ ಸೋಮ್ ದೇವ್ ದೇವ್‍ವರ್ಮನ್ ರೂಬಿನ್ ಸ್ಟಾಥಮ್ ವಿರುದ್ಧ ಸೆಣಸಲಿದ್ದರೆ, ಯೂಕಿ ಮೈಕೆಲ್ ವೀನಸ್ ವಿರುದ್ಧ ಕಾದಾಡಲಿದ್ದಾರೆ. ಆಸಕ್ತಿದಾಯಕ ಸಂಗತಿ ಎಂದರೆ ಈ ಋತುವಿನ ಮೊದಲ ಗ್ರಾಂಡ್‍ಸ್ಲಾಂ ಟೂರ್ನಿ ಆಸ್ಟ್ರೇಲಿಯನ್ ಓಪನ್‍ನಲ್ಲಿ ಇದೇ ಮೈಕೆಲ್ ಜತೆಗೆ ಯೂಕಿ ಪುರುಷರ ಡಬಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ತಲುಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.