ಚುಟುಕು ಸರಣಿಗೆ ಮಿಥಾಲಿ ಪಡೆ
ಪ್ರವಾಸಿ ನ್ಯೂಜಿಲೆಂಡ್ ವನಿತಾ ಕ್ರಿಕೆಟ್ ತಂಡದ ವಿರುದ್ಧದ ಐದು ಏಕದಿನ ಪಂದ್ಯ ಸರಣಿಯನ್ನು 3-2 ರಿಂದ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಮಿಥಾಲಿ ರಾಜ್...

ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್ ವನಿತಾ ಕ್ರಿಕೆಟ್ ತಂಡದ ವಿರುದ್ಧದ ಐದು ಏಕದಿನ ಪಂದ್ಯ ಸರಣಿಯನ್ನು 3-2 ರಿಂದ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಮಿಥಾಲಿ ರಾಜ್ ಸಾರಥ್ಯದ ಭಾರತದ ವನಿತಾ ಕ್ರಿಕೆಟ್ ತಂಡ ಇದೀಗ ಶನಿವಾರ ಶುರುವಾಗುತ್ತಿರುವ ಮೂರು ಚುಟುಕು ಪಂದ್ಯ ಸರಣಿಗೆ ಸನ್ನದ್ದವಾಗಿದೆ.
ಏಕದಿನ ಸರಣಿಯಲ್ಲಿನ ಆರಂಭಿಕ ವೈಫಲ್ಯವನ್ನು ಮೆಟ್ಟಿ ನಿಂತ ಭಾರತ, ಕಿವೀಸ್ ಭರ್ಜರಿ ತಿರುಗೇಟು ನೀಡಿ ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಸಫಲವಾಗಿತ್ತು. ಇದೇ ಗೆಲುವಿನ ಓಟವನ್ನು ಟಿ-20 ಪಂದ್ಯಗಳಲ್ಲಿಯೂ ವಿಸ್ತರಿಸುವ ಇರಾದೆಯಲ್ಲಿದೆ.
ಆದರೆ ಏಕದಿನ ಸರಣಿಯಲ್ಲಿನ ಸೋಲಿನ ಬೇಗುದಿಯಿಂದ ಬೇಯುತ್ತಿರುವ ಸುಜಿ ಬೇಟ್ಸ್ ನಾಯಕತ್ವದ ಕಿವೀಸ್ ಪಡೆ ಚುಟುಕು ಸರಣಿಯನ್ನಾದರೂ ಗೆದ್ದು ದಿಟ್ಟ ಉತ್ತರ ನೀಡುವ ತವಕದಲ್ಲಿದೆ.
ಅಂದ್ಹಾಗೆ ಉಭಯರ ನಡುವಿನ ಈ ಮೂರು ಟಿ-20 ಪಂದ್ಯ ಮೊದಲು ಬೆಂಗಳೂರು ಹೊರವಲವಯದ ಆಲೂರಿನ ಕೆಎಸ್ ಸಿಎ ಮೈದಾನದಲ್ಲಿ ನಡೆಯಬೇಕಿತ್ತಾದರೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


