ವಿಶ್ವ ಕುಸ್ತಿ ಪಂದ್ಯಾವಳಿ:ಭಾರತ ತಂಡದಲ್ಲಿ ಕುಸ್ತಿಪಟು ರಫೀಕ್ ಹೋಳಿ
ಅಮೆರಿಕ ಲಾಸ್ ವೆಗಾಸ್ ನಲ್ಲಿ ಸೆ.7ರಿಂದ 12ರವರೆಗೆ ನಡೆಯುವ ವಿಶ್ವ ಕುಸ್ತಿ ಪಂದ್ಯಾವಳಿ-2015ರಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ನಗರ ಕ್ರೀಡಾ ನಿಲಯದ ಕುಸ್ತಿಪಟು ರಫೀಕ್ ಹೋಳಿ ಸ್ಥಾನ ಪಡೆದಿದ್ದಾರೆ...

ದಾವಣಗೆರೆ: ಅಮೆರಿಕ ಲಾಸ್ ವೆಗಾಸ್ ನಲ್ಲಿ ಸೆ.7ರಿಂದ 12ರವರೆಗೆ ನಡೆಯುವ ವಿಶ್ವ ಕುಸ್ತಿ ಪಂದ್ಯಾವಳಿ-2015ರಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ನಗರ ಕ್ರೀಡಾ ನಿಲಯದ ಕುಸ್ತಿಪಟು ರಫೀಕ್ ಹೋಳಿ ಸ್ಥಾನ ಪಡೆದಿದ್ದಾರೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕುಸ್ತಿ ತರಬೇತುದಾರ ಆರ್. ಶಿವಾನಂದ ತಿಳಿಸಿದರು.
ಧಾರವಾಡ ಜಿಲ್ಲೆ ಸಿಂಗನಹಳ್ಳಿಯ ರಫೀಕ್ ಹೋಳಿ, ದಾವಣಗೆರೆ ಕ್ರೀಡಾ ನಿಲಯದಲ್ಲಿ ತರಬೇತಿ ಪಡೆದ ಕುಸ್ತಿಪಟು, ಈಗ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಳಿ ವಿಶ್ವ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾದ ರಾಜ್ಯದ 2ನೇ ಕುಸ್ತಿಪಟುವೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಎಂದು ಹೇಳಿದರು.
25 ವರ್ಷದ ಹಿಂದೆ ಎಂ.ಆರ್.ಪಾಟೀಲ್ ಆಯ್ಕೆಯಾಗಿದ್ದರು. ಅದನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಇಂತಹ ಅವಕಾಶ ಸಿಕ್ಕಿರಲಿಲ್ಲ. ಇದೀಗ ರಫೀಕ್ ಹೋಳಿ ಅಂತಹ ಅವಕಾಶ ಪಡೆದಿದ್ದು, ವಿಶ್ವ ಕುಸ್ತಿ ಪಂದ್ಯಾವಳಿಯಲ್ಲಿ ರಫೀಕ್ ಹೋಳಿ ಅತ್ಯುತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದರು.
ದೇಶದ ಇತರೆ ರಾಜ್ಯಗಳಲ್ಲಿ ಕುಸ್ತಿ ಹಾಗೂ ಕುಸ್ತಿಪಟುಗಳಿಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತವೆ. ಪದಕ ವಿಜೇತರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಕರ್ನಾಟಕದಲ್ಲಿ ಅಂತಹ ಪ್ರೋತ್ಸಾಹ, ಸ್ಪಂದನೆ ಇಲ್ಲ. ಹಿಂದೆ ಇದ್ದ ಮೀಸಲಾತಿ ಸಹ ತೆಗೆದು ಹಾಕಲಾಗಿದೆ. ಕುಸ್ತಿಪಟುಗಳಿಗೆ ಇದರಿಂದ ಅನ್ಯಾಯವಾಗುತ್ತಿದ್ದು, ಸರ್ಕಾರ ಇದರತ್ತ ಗಮನ ಹರಿಸಬೇಕು.
-ಆರ್. ಸುರೇಶ್ ನಾಯ್ಕ, ಹಿರಿಯ ಕುಸ್ತಿಪಟು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


