ವಿಶ್ವ ಚಾಂಪಿಯನ್‍ಶಿಪ್‍ಗೆ ಯೋಗೇಶ್ವರ್
ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತ ಯೋಗೇಶ್ವರ ದತ್ ಹಾಗೂ ಯುವ ಬಾಕ್ಸರ್ ನಾರ್‍ಸಿಂಗ್ ಯಾದವ್ ಮಂಗಳವಾರ.....

ನವದೆಹಲಿ: ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತ ಯೋಗೇಶ್ವರ ದತ್ ಹಾಗೂ ಯುವ ಬಾಕ್ಸರ್ ನಾರ್‍ಸಿಂಗ್ ಯಾದವ್ ಮಂಗಳವಾರ ವಿಶ್ವ ರೆಸ್ಲಿಂಗ್ (ಕುಸ್ತಿ) ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇಲ್ಲಿನ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಟ್ರಯಲ್ಸ್ ಯೋಗೇಶ್ವರ್ ಹಾಗೂ ನಾರ್‍ಸಿಂಗ್ ಜಯ ಸಾಧಿಸಿದರೆಂದು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಪ್ರಾಥಮಿಕ ಹಂತದ ಸ್ಪರ್ಧೆಯಲ್ಲಿ ಬೈ ಪಡೆದಿದ್ದ ಯೋಗೇಶ್ವರ್, ಅಂತಿಮ ಬೌಟ್‍ನಲ್ಲಿ ಅಮಿತ್ ಕುಮಾರ್ ಧನ್‍ಕಾರ್ ವಿರುದ್ಧ ಕಠಿಣಕಾರಿ ಸೆಣಸಾಟದಲ್ಲಿ ಪ್ರಯಾಸದ ಗೆಲುವು ಪಡೆದರು. ಆರು ನಿಮಿಷಗಳ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಯೋಗೇಶ್ವರ್ 6-3ರಿಂದ ಜಯ ಪಡೆದರು. ಇನ್ನು ಮತ್ತೋರ್ವ ಕುಸ್ತಿಪಟು ನಾರ್ ಸಿಂಗ್ ಮತ್ತು ಪ್ರವೀಣ್ ರಾಣಾ ನಡುವಣದ ಕುಸ್ತಿಯೂ ಕತ್ತಿಯ ಅಲಗಿನ ಮೇಲಿನ ಕಸರತ್ತಿನಂತಿತ್ತು. ಅಂತಿಮವಾಗಿ
ಈ ಪ್ರಬಲ ಸೆಣಸಾಟದಲ್ಲಿ ನಾರ್‍ಸಿಂಗ್ 6-5ರಿಂದ ಜಯ ಪಡೆದು ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಗಿಟ್ಟಿಸಿಕೊಂಡರು. ಏತನ್ಮಧ್ಯೆ 57 ಕೆ.ಜಿ. ವಿಭಾಗದ ಮತ್ತೊಂದು ಹಣಾಹಣಿಯಲ್ಲಿ ಅಮಿತ್ ಕುಮಾರ್ ಸಂದೀಪ್ ತೋಮಾರ್ ವಿರುದ್ದ 1-2ರ ಹಿನ್ನಡೆಯ ಹೊರತಾಗಿಯೂ ಕೊನೆಗೆ 3-2ರ ಗೆಲುವಿನೊಂದಿಗೆ ನಿಟ್ಟುಸಿರಿಟ್ಟರು.
ಇನ್ನುಳಿದಂತೆ ನರೇಶ್ ಕುಮಾರ್ (86 ಕೆ.ಜಿ.), ಮೌಸಮ್ ಖತ್ರಿ (97 ಕೆ.ಜಿ.) ಹಾಗೂ ಸುಮಿತ್ 125 ಕೆ.ಜಿ. ವಿಭಾಗದಲ್ಲಿ ಗೆಲುವು ಸಾ„ಸಿ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದರು. ಅಂದ್ಹಾಗೆ ಸೆಪ್ಟೆಂಬರ್ 7ರಿಂದ 12ರವರಗೆ ಅಮೆರಿಕಾದ ಲಾಸ್ ವೇಗಾಸ್ ನಲ್ಲಿ ವಿಶ್ವ ಕುಸ್ತಿ ಚಾಂಪಿಯನ್‍ಶಿಪ್ ನಡೆಯಲಿದ್ದು, ಇದು ಮುಂದಿನ ವರ್ಷ ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕೂಟದ ಮೊದಲ ಸುತ್ತಿನ ಅರ್ಹತಾ ಚಾಂಪಿಯನ್‍ಶಿಪ್ ಕೂಡ ಎನಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


