ಪೇಸ್‍ಗೆ ಮಿಶ್ರಫಲ : ಹೊರಬಿದ್ದ ಭೂಪತಿ
ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ಮಿಶ್ರಫಲ ಅನುಭವಿಸಿದ್ದಾರೆ...

ಲಂಡನ್ : ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ಮಿಶ್ರಫಲ ಅನುಭವಿಸಿದ್ದಾರೆ. ಜೊತೆಯಾಟಗಾರ್ತಿ ಮಾರ್ಟಿನಾ ಹಿಂಗಿಸ್ ಜತೆ ಪ್ರತಿಷ್ಠಿತ ಟೂರ್ನಿಯ ಮಿಶ್ರ ಡಬಲ್ಸ್ ನಲ್ಲಿ ಮುನ್ನಡೆ ಸಾಧಿಸಿದ ಪೇಸ್ ಡಬಲ್ಸ್ ನಿಂದ ಹೊರಬಿದ್ದಿದ್ದಾರೆ. ಸೋಮವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೇಸ್ ತಮ್ಮ ಜತೆಯಾಟಗಾರ ಕೆನಡಾದ ಡೇನಿಯಲ್ ನೆಸ್ಟರ್ ಅವರೊಂದಿಗೆ ನಿರಾಸೆ ಅನುಭವಿಸಿದರು. ಆಸ್ಟ್ರಿಯಾದ ಅಲೆಕ್ಸಾಂಡರ್ ಪೆಯಾ ಹಾಗೂ ಬ್ರೆಜಿಲ್‍ನ ಬ್ರುನೊ ಸೊರೆಸ್ ಜೋಡಿ ಎದುರು ನಡೆದ ಐದು ಸೆಟ್‍ಗಳ ಸುದೀರ್ಘ ಕಾಲದ ಸೆಣಸಾಟದಲ್ಲಿ 8ನೇ ಶ್ರೇಯಾಂಕಿತ ಇಂಡೋ-ಕೆನಡಿಯನ್ ಜೋಡಿ 3-6, 5-7, 6-3, 6-2 ಹಾಗೂ 2-6 ಸೆಟ್‍ಗಳಿಂದ ಸೋತು ನಿರಾಸೆ ಅನುಭವಿಸಿತು.
ಆದರೆ ಡಬಲ್ಸ್ ನಲ್ಲಿ ಏಳನೇ ಶ್ರೇಯಾಂಕಿತ ಪೇಸ್ ಹಾಗೂ ಹಿಂಗೀಸ್ ಜೋಡಿ ಭಾನುವಾರ ತಡರಾತ್ರಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ _ಫ್ರಾನ್ಸ್ ನ ಎಡ್ವರ್ಡ್ ರೋಜರ್ -ವಸ್ಸೆಲಿನ್ ಹಾಗೂ ಅಲಿಸಿ ಕಾರ್ನೆಟ್ ವಿರುದ್ಧಛಿ 6-4, 6-2ರ ಎರಡು ನೇರ ಸೆಟ್‍ಗಳಲ್ಲಿ ಮಣಿಸಿ ತೃತೀಯ ಸುತ್ತಿಗೆ ಮುನ್ನಡೆದರು. ಪ್ರೀ-ಕ್ವಾರ್ಟರ್_ಫೈನಲ್‍ನಲ್ಲಿ ನ್ಯೂಜಿಲೆಂಡ್ ಆರ್ಟೆಮ್ ಸಿಟಾಕ್ ಹಾಗೂ ಆಸ್ಟ್ರೇಲಿಯಾದ ಅನಸ್ಟಾಸಿಯಾ ಆಡಿನೋವಾ ವಿರುದ್ಧ ಪೇಸ್ ಹಾಗೂ ಹಿಂಗಿಸ್ ಜೋಡಿ ಸೆಣಸಲಿದೆ.
ಇತ್ತ ಸ್ಪೇನ್ ನ ಮರಿಯಾ ಜೋಸ್ ಮಾರ್ಟಿನೆಸ್ ಸ್ಯಾಂಚೆಜ್ ಜತೆಗೂಡಿದ್ದ ಮಹೇಶ್ ಭೂಪತಿ ಆರನೇ ಶ್ರೇಯಾಂಕಿತ ಜೋಡಿ ರೊಮೇನಿಯಾದ ಹೊರಿಯಾ ಟೆಕೌ ಹಾಗೂ ಸ್ಲೊವೇನಿಯಾದ ಕ್ಯಾತರೀನಾ ಶ್ರೀಬಾಟ್ನಿಕ್ ಜೋಡಿ ಎದುರು ಎರಡನೇ ಸುತ್ತಿನ ಪಂದ್ಯದಲ್ಲಿ 2-6, 4-6 ಸೆಟ್‍ಗಳ ಅಂತರದಿಂದ ಸೋಲನುಭವಿಸಿತು.
ಸಾನಿಯಾ-ಹಿಂಗಿಸ್ ಕ್ವಾರ್ಟರ್‍ಗೆ:
ಅಗ್ರಶ್ರೇಯಾಂಕಿತ ಜೋಡಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈ ನಲ್ ಪ್ರವೇಶಿಸಿದೆ. ಸೋಮವಾರ ಇಲ್ಲಿನ ಆರನೇ ಕೋರ್ಟ್‍ನಲ್ಲಿ ನಡೆದ ಪ್ರೀ-ಕ್ವಾರ್ಟರ್ ಪಂದ್ಯದಲ್ಲಿ ಈ ಇಂಡೋ ಸ್ವಿಸ್ ಜೋಡಿ ಹದಿನಾರನೇ ಶ್ರೇಯಾಂಕಿತ ಸ್ಪೇನ್ ನ ಅನಬೆಲ್ ಮೆಡಿನಾ ಗಾರ್ಗಿಯಸ್ ಹಾಗೂ ಅರಾಂಕ್ಸ ಪರ್ರಾ ಸ್ಯಾಂಟೋಜ ವಿರುದ್ಧ 6-4, 6-3 ಸೆಟ್‍ಗಳಲ್ಲಿ ಜಯ ಪಡೆಯಿತು. ಒಂದು ತಾಸು, ಆರು ನಿಮಿಷಗಳ ಕಾಲ ನಡೆದ ಎರಡೂ ಸೆಟ್‍ಗಳಲ್ಲಿ ಪಾರಮ್ಯ ಮೆರೆದ ಸಾನಿಯಾ ಹಾಗೂ ಹಿಂಗಿಸ್, ಪಂದ್ಯದಾದ್ಯಂತ ಪ್ರತಿಸ್ಪರ್ಧಿಗಳ ವಿರುದ್ಧಛಿ ಹಿಡಿತ ಸಾಧಿಸಿದರು. ಮೊದಲ ಸರ್ವ್‍ನಲ್ಲೇ ಪಾಯಿಂಟ್ಸ್ ಕಲೆಹಾಕಿದ ಸಾನಿಯಾ- ಹಿಂಗಿಸ್, ಆನಂತರವೂ ಶ್ರೇಷ್ಠ ನಿರ್ವಹಣೆ ನೀಡಿದರು. ಅದರ ಫಲವಾಗಿ ಪಂದ್ಯದಲ್ಲಿ 104 ಪಾಯಿಂಟ್ಸ್ ಗಳಲ್ಲಿ 59 ಪಾಯಿಂಟ್ಸ್ ಗಳನ್ನು ತಮ್ಮದಾಗಿಸಿಕೊಂಡರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


