ವಿಶ್ವ ಹಾಕಿ ಲೀಗ್: ಭಾರತಕ್ಕೆ ನಿರಾಸೆ
ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಸರ್ದಾರ್ ಸಿಂಗ್ ನೇತೃತ್ವದ ಭಾರತ ಪುರುಷದ ಹಾಕಿ ತಂಡ ವಿಶ್ವಕಪ್ ಹಾಕಿ ಲೀಗ್ ಸೆಮಿಫೈನಲ್ ನಲ್ಲಿ ಮುಗ್ಗರಿಸಿದೆ...

ಆಂಟ್ವರ್ಪ್ (ಬೆಲ್ಜಿಯಂ) : ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಸರ್ದಾರ್ ಸಿಂಗ್ ನೇತೃತ್ವದ ಭಾರತ ಪುರುಷದ ಹಾಕಿ ತಂಡ ವಿಶ್ವಕಪ್ ಹಾಕಿ ಲೀಗ್ ಸೆಮಿಫೈನಲ್ ನಲ್ಲಿ ಮುಗ್ಗರಿಸಿದೆ, ಶುಕ್ರವಾರ ನಡೆದ ಅಂತಿಮ 4ರ ಘಟ್ಟದ ಪಂದ್ಯದಲ್ಲಿ ಆತಿಥೇಯ ಬೆಲ್ಜಿಯಂ ತಂಡವನ್ನು ಎದುರಿಸಿದ ಭಾರತ 4-0 ಗೋಲುಗಳ ಅಂತರದಲ್ಲಿ ಸೋಲು ಕಂಡಿತು.
ಈ ಮೂಲಕ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ಗೆ ಬೆಲ್ಜಿಯಂ ಅರ್ಹತೆ ಪಡೆದಿದೆ. ಪಂದ್ಯದ ಆರಂಭದಿಂದಲೂ ಮಿಂಚಿನ ಆಟವಾಡಿದ ಅತಿಥೇಯರು, ಆರಂಭದಿಂದಲೂ ಭಾರತ ತಂಡದ ವಿರುದ್ಧ ಪ್ರಭುತ್ವ ಸಾಧಿಸಿದರು. 2ನೇ ನಿಮಿಷದಲ್ಲಿ ಗೋಸಿಯನ್ಸ್ ಗಳಿಸಿದ ಗೋಲ್ ನಿಂದಾಗಿ 2-0 ರ ಮುನ್ನಡೆ ಸಾಧಿಸಿದ್ದ ಬೆಲ್ಜಿಯಂ ಈ ಪಂದ್ಯದ ದ್ವಿತೀಯಾರ್ಧದಲ್ಲಿ ಹಿಡಿತ ಸಾಧಿಸಿತು. 41 ನೇ ನಿಮಿಷದಲ್ಲಿ ಫ್ಲೋರೆಂಟ್ ವ್ಯಾನ್ ಔಬುಲ್ ಗಳಿಸಿದ ಗೋಲು ಅತಿಥೇಯರಿಗೆ 3-0 ಅಂತರದಲ್ಲಿ ಮುನ್ನಡೆ ಒದಗಿಸಿಕೊಟ್ಟರೆ 53 ನೇ ನಿಮಿಷದಲ್ಲಿ 4-0 ಗೋಲುಗಳ ಪ್ರಾಬಲ್ಯ ಸಾಧಿಸಲು ನೆರವಾಯಿತು.
ಇಂದು ಭಾರತಕ್ಕೆ ಜಪಾನ್ ಸವಾಲು: ಸತತ 36 ವರ್ಷಗಳ ನಂತರ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಿರುವ ಭಾರತ ವನಿತೆಯರ ತಂಡ ಈಗ ಜಪಾನ್ ವಿರುದ್ಧ ಸೆಣೆಸಲು ಸಜ್ಜಾಗಿದೆ.
ಶನಿವಾರ ನಡೆಯಲಿರುವ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ಐದನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಭಾರತ ಗೆಲವು ದಾಖಲಿಸಬೇಕಾಗಿದೆ. ಆಗ ಮಾತ್ರ ಭಾರತ ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ಟೂರ್ನಿಗೆ ಆಯ್ಕೆಯಾಗುವ ಆಸೆ ಇನ್ನಷ್ಟು ಜೀವಂತವಾಗಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


