ಕ್ರೀಡೆ

ಈಡನ್ ಗಾರ್ಡನ್ ನಲ್ಲಿ ಶತಕ ಬಾರಿಸುವ ಬಗ್ಗೆ ಭಯ ಕಾಡಿತ್ತು: ಗಂಗೂಲಿ

ಐತಿಹಾಸಿಕ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಒಂದಾದರೂ ಅಂತಾರಾಷ್ಟ್ರೀಯ ಶತಕ ಬಾರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲವಲ್ಲಾ...

ಈಡನ್ ಗಾರ್ಡನ್ ನಲ್ಲಿ ಶತಕ ಬಾರಿಸುವ ಬಗ್ಗೆ ಭಯ ಕಾಡಿತ್ತು: ಗಂಗೂಲಿ
ಸೌರವ್ ಗಂಗೂಲಿ
Published On :

ಕೊಲ್ಕತ್ತಾ: ಐತಿಹಾಸಿಕ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಒಂದಾದರೂ ಅಂತಾರಾಷ್ಟ್ರೀಯ ಶತಕ ಬಾರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಭಯ ನನ್ನನ್ನು ಕಾಡಿತ್ತು ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ನಾನು ಈಡನ್ ನಲ್ಲಿ ಶತಕ ಬಾರಿಸಲು ಸಾಧ್ಯವಾಗುವುದೋ? ಎಂಬ ಭಯ ನನಗಿತ್ತು. ಆದರೆ ನಾನು ಪಾಕಿಸ್ತಾನ ವಿರುದ್ಧ ನಾನು ಶತಕ ಬಾರಿಸಿದೆ.

2007, ಡಿಸೆಂಬರ್ 1ರಂದು ನನ್ನ ಆ ಭಯ ದೂರವಾಯ್ತು. ಪಾಕಿಸ್ತಾನದ ವಿರುದ್ಧ ನಡೆದ ಎರಡನೇ ಟೆಸ್ಟ್‌ನಲ್ಲಿ  ನಾನು  102ರನ್ ಸಿಡಿಸಿದ್ದೆ ಎಂದು ಗಂಗೂಲಿ ತಮ್ಮ ಕ್ರಿಕೆಟ್ ಜೀವನದ ಭಯದ ಬಗ್ಗೆ ಹೇಳಿದ್ದಾರೆ.
 
ಬುಧವಾರ 'ಈಡನ್ ಗಾರ್ಡನ್ -ಲೆಜೆಂಡ್ ಆ್ಯಂಡ್ ರೊಮ್ಯಾನ್ಸ್ 'ಎಂಬ ಪುಸ್ತಕ ಲೋಕಾರ್ಪಣೆಯ ಕ್ಷಣದಲ್ಲಿ ಗಂಗೂಲಿ ತನ್ನ ಹಳೆಯ ನೆನಪುಗಳನ್ನು ಈ ರೀತಿ ಬಿಚ್ಚಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.