ಕ್ರೀಡೆ

ಫೆಡರರ್ ಸಾವಿರ ಗೆಲವಿನ ಸರದಾರ

ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ಈಗ 1000...

ಫೆಡರರ್ ಸಾವಿರ ಗೆಲವಿನ ಸರದಾರ
ರೋಜರ್ ಫೆಡರರ್
Published On :

ಬ್ರಿಸ್ಬೇನ್: ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ಈಗ 1000 ಎಟಿಪಿ ಪಂದ್ಯಗಳ ಸರದಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದ ಫೆಡರರ್ ಈ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಸುತ್ತಿನಲ್ಲಿ ಕೆನಡಾ ಆಟಗಾರ ಮಿಲೊಸ್ ರಾವೊನಿಕ್ ವಿರುದ್ಧ ಫೆಡರರ್ 6-4, 6-7(2-7), 6-4 ಸೆಟ್‌ಗಳ ಅಂತರದಲ್ಲಿ ಗೆಲವಿನ ಸಿಹಿ ಸವಿದರು.

ಎರಡು ಗಂಟೆ 13 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಫೆಡರರ್ ಉತ್ತಮ ಆರಂಭದ ಮೂಲಕ ಶುಭಾರಂಭ ಮಾಡಿದರು. ಮೊದಲ ಸೆಟ್‌ನಲ್ಲಿ 6-4 ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿದ ಫೆಡರರ್, ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು.

ಮೂರನೇ ಸೆಟ್‌ನಲ್ಲಿ ಒತ್ತಡದಲ್ಲಿದ್ದರೂ ಫೆಡರರ್, ಜಾಗರೂಕತೆಯಿಂದ ಆಡಿದರು. ಆ ಮೂಲಕ ಅಂತಿಮ ಸೆಟ್‌ನಲ್ಲಿ 6-4ರ ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡು ಪ್ರಶಸ್ತಿಗೆ ಮುತ್ತಿಕ್ಕಿದರು. ಈ ಮೂಲಕ ಫೆಡರರ್ 83ನೇ ಪ್ರಶಸ್ತಿಯನ್ನು ಬಾಚಿಕೊಂಡರು. ಅಲ್ಲದೆ ಸಾವಿರ ಪಂದ್ಯಗಳನ್ನು ಗೆದ್ದ ಮೂರನೇ ಆಟಗಾರನಾದರು.

ಈ ಪಂದ್ಯಾವಳಿಯನ್ನು ಇದೇ ತಿಂಗಳು ಅಂದರೆ ಜ. 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಗೆ ಪೂರ್ವಸಿದ್ಥತೆ ನಡೆಸಲು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗಿತ್ತು. ಈ ಗೆಲವಿನಿಂದ ಆತ್ಮ ವಿಶ್ವಾಸ ಹೆಚ್ಚಿಕೊಂಡಿರುವ ಫೆಡರರ್, ಉತ್ತಮ ಫಾರ್ಮ್‌ನೊಂದಿಗೆ ಮೆಲ್ಬರ್ನ್‌ಗೆ ತೆರಳಲಿದ್ದು ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲ್ಯಾಮ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.