ಕ್ರೀಡೆ

ಬಗಾನ್-ಪುಣೆ ಡ್ರಾಗೆ ನಿಟ್ಟುಸಿರು

ಎರಡನೇ ಅವಧಿಯ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಪುಣೆ ಎಫ್‌ಸಿ ತಂಡದ ಆಟಗಾರರು...

ಬಗಾನ್-ಪುಣೆ ಡ್ರಾಗೆ ನಿಟ್ಟುಸಿರು
ಪುಣೆ ಎಫ್‌ಸಿ ತಂಡದ ಆಟಗಾರರು ಫೇಡರೇಶನ್ ಕಪ್ ಫುಟ್ಬಾಲ್ ಟೂರ್ನಿಯ 'ಬಿ' ಗುಂಪಿನ ಪಂದ್ಯದಲ್ಲಿ ಮೋಹನ್ ಬಗಾನ್ ಎದುರು ಡ್ರಾ ಫಲಿತಾಂಶ ಪಡೆಯಲು ಸಫಲರಾದರು.
Published On :

ವಾಸ್ಕೋ: ಎರಡನೇ ಅವಧಿಯ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಪುಣೆ ಎಫ್‌ಸಿ ತಂಡದ ಆಟಗಾರರು ಫೇಡರೇಶನ್ ಕಪ್ ಫುಟ್ಬಾಲ್ ಟೂರ್ನಿಯ 'ಬಿ' ಗುಂಪಿನ ಪಂದ್ಯದಲ್ಲಿ ಮೋಹನ್ ಬಗಾನ್ ಎದುರು ಡ್ರಾ ಫಲಿತಾಂಶ ಪಡೆಯಲು ಸಫಲರಾಗಿದ್ದಾರೆ.

ತಿಲಕ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪುಣೆ ಎಫ್‌ಸಿ ಮತ್ತು ಮೋಹನ್ ಬಗಾನ್ 1-1 ಗೋಲಿನಿಂದ ಡ್ರಾ ಫಲಿತಾಂಶಕ್ಕೆ ತೃಪ್ತಿ ಹೊಂದಿದವು. ಮೋಹನ್ ಬಗಾನ್ ಪ್ರಥಮಾರ್ಧದ 26ನೇ ನಿಮಿಷದಲ್ಲಿಯೇ ಪಿಯೇರಾ ಬೋಯಾ ಮೂಲಕ ಗೋಲು ಗಳಿಸಿ ಶುಭಾರಂಭ ಮಾಡಿತ್ತು.

ಆದರೆ, ಉತ್ತರಾರ್ಧದಲ್ಲಿ ಪಂದ್ಯದ 66ನೇ ನಿಮಿಷದ ಆಟದಲ್ಲಿ ರ್ಯೂಜಿ ಸುಯೋಕಾ ಪುಣೆ ಎಫ್‌ಸಿ ಪರಗೋಲುಗಳಿಸುವುದರೊಂದಿಗೆ ಅಂತಿಮವಾಗಿ ಉಭಯ ತಂಡಗಳು ಅಂಕ ಹಂಚಿಕೆಯೊಂದಿಗೆ ನಿಟ್ಟುಸಿರುಬಿಟ್ಟವು. ಈ ಡ್ರಾದಿಂದಾಗಿ ಬಗಾನ್ 2 ಅಂಕ ಹಾಗೂ ಪುಣೆ 4 ಅಂಕಗಳನ್ನು ತಲುಪಿದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.