ಲಂಕೆಗೆ ಆಹಾರವಾದ ಬಾಂಗ್ಲಾ
ಅನುಭವಿ ದಾಂಡಿಗರಾದ ತಿಲಕರತ್ನೆ ದಿಲ್ಷಾನ್ ಮತ್ತು ಕುಮಾರ ಸಂಗಕ್ಕಾರ ಅವರ ಅಜೇಯ ಶತಕಗಳ ನೆರವಿನಿಂದ..

ಮೆಲ್ಬರ್ನ್: ಅನುಭವಿ ದಾಂಡಿಗರಾದ ತಿಲಕರತ್ನೆ ದಿಲ್ಷಾನ್ ಮತ್ತು ಕುಮಾರ ಸಂಗಕ್ಕಾರ ಅವರ ಅಜೇಯ ಶತಕಗಳ ನೆರವಿನಿಂದ ಶ್ರೀಲಂಕಾ ತಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಂದು ಜಯ ದಾಖಲಿಸಿದೆ.
ಮೆಲ್ಬರ್ನ್‍ನಲ್ಲಿ ಗುರುವಾರ ನಡೆದ `ಎ' ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 92 ರನ್‍ಗಳಿಂದ ಬಾಂಗ್ಲಾದೇಶವನ್ನು ಪರಾಭವಗೊಳಿಸಿತು. ಗೆಲ್ಲಲು 333 ರನ್‍ಗಳ ಕಠಿಣ ಗುರಿ ಪಡೆದಿದ್ದ ಬಾಂಗ್ಲಾದೇಶ, 47 ಓವರುಗಳಲ್ಲಿ 240 ರನ್‍ಗಳಿಗೆ ಪತನಗೊಂಡಿತು. ಬಾಂಗ್ಲಾ ಪರ ಶಬ್ಬೀರ್ ರೆಹಮಾನ್ ಅರ್ಧಶತಕ ಮತ್ತು ಶಕೀಬ್ ಅಲ್ ಹಸನ್ 46 ರನ್‍ಗಳಿಸಿದ್ದು ಬಿಟ್ಟರೆ, ಇತರೆ ಬ್ಯಾಟ್ಸ್‍ಮನ್‍ಗಳಿಂದ ಉತ್ತಮ ಪ್ರದರ್ಶನ ಹೊರಹೊಮ್ಮಲಿಲ್ಲ. ಈ ಮಧ್ಯೆ ಪೆರೇರಾ 6.2 ಓವರುಗಳ ಬಳಿಕ ಬೆನ್ನು ನೋವಿನ ಸಮಸ್ಯೆಯಿಂದಾಗಿ ಅರ್ಧಕ್ಕೆ ಹೊರನಡೆದರು. ಈ ಓವರ್ ಅನ್ನು ಮ್ಯಾಥ್ಯೂಸ್ ಪೂರ್ಣಗೊಳಿಸಿದರು.
ಇದಕ್ಕೆ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರುಗಳಲ್ಲಿ ಕೇವಲ 1 ವಿಕೆಟ್ ಒಪ್ಪಿಸಿ 332 ರನ್‍ಗಳ ಬೃಹತ್ ಮೊತ್ತ ಸಂಪಾದಿಸಿತು. ಆರಂಭಿಕರಾದ ಲಹಿರು ತಿರಿಮಾನೆ ಮತ್ತು ದಿಲ್ಷಾನ್ ಮೊದಲ ವಿಕೆಟ್‍ಗೆ 122 ರನ್ ಸೇರಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ದಿಲ್ಷಾನ್ ಮತ್ತು ಸಂಗಕ್ಕಾರ ಮುರಿಯದ ಎರಡನೇ ವಿಕೆಟ್ ಗೆ ಕೇವಲ 153 ಎಸೆತಗಳಲ್ಲಿ 210 ರನ್ ಪೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


