ಕ್ರೀಡೆ

ವಿಶ್ವಕಪ್: ಆಫ್ಘಾನಿಸ್ತಾನಕ್ಕೆ ಚೊಚ್ಚಲ ಗೆಲುವು

ವಿಶ್ವಕಪ್: ಆಫ್ಘಾನಿಸ್ತಾನಕ್ಕೆ ಚೊಚ್ಚಲ ಗೆಲುವು
ಆಫ್ಘಾನಿಸ್ತಾನ
Published On :

ಡುನೆಡಿನ್: ವಿಶ್ವಕಪ್ ಪಂದ್ಯಾವಳಿಯಲ್ಲಿ ಆಫ್ಘಾನಿಸ್ತಾನ ತಂಡ ಚೊಚ್ಚಲ ಗೆಲುವು ದಾಖಲಿಸಿದೆ.

ಎ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆಫ್ಘಾನಿಸ್ತಾನ 1 ವಿಕೆಟ್ ನ ರೋಚಕ ಗೆಲವು ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 210 ರನ್ ಗೆ ಆಲೌಟ್ ಆಯಿತು. 211 ರನ್ ಗುರಿಯನ್ನು ಬೆನ್ನತ್ತಿದ್ದ ಆಫ್ಘಾನಿಸ್ತಾನ ಕೊನೆಯ ಓವರ್ ನ ಮೂರನೇ ಎಸೆತದಲ್ಲಿ ಗೆಲುವಿನ ನಗೆ ಬೀರಿದೆ.

ಸಮೀವುಲ್ಲಾ ಶೆನ್ವಾರಿ ಆಫ್ಘಾನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇವಲ 4 ರನ್ನಿಂದ ಶತಕ ವಂಚಿತರಾದ ಶೆನ್ವಾರಿ ತಮ್ಮ ತಂಡವನ್ನ ಗೆಲುವಿನ ಸನಿಹಕ್ಕೆ ತಂದರು.
ಬೌಲರ್ ಗಳಾದ ಹಮೀದ್ ಹಸನ್ ಮತ್ತು ಶಾಪೂರ್ ಜದ್ರನ್ ಅಪರಿಮಿತ ಒತ್ತಡದಲ್ಲಿಯೂ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಚೊಚ್ಚಲ ಗೆಲುವು ತಂದುಕೊಟ್ಟರು.

ಇದಕ್ಕೂ ಮುನ್ನ ಸ್ಕಾಟ್ಲೆಂಡ್ ತಂಡ ಸಾಧಾರಣ ಮೊತ್ತ ಕಲೆಹಾಕಿತು. ಯಾವೊಬ್ಬರೂ ಅರ್ಧಶತಕದ ಗಡಿ ದಾಟಲಿಲ್ಲ. ಆಫ್ಘನ್ ಬೌಲರುಗಳು ಬಿಗಿಬೌಲಿಂಗ್ ಪ್ರದರ್ಶನ ನೀಡಿ ಸ್ಕಾಟ್ಲೆಂಡಿಗರನ್ನ ಕಟ್ಟಿಹಾಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.