ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್‌ಗೆ 119 ರನ್‌ಗಳ ಜಯ
ವಿಶ್ವಕಪ್ ಪಂದ್ಯದಲ್ಲಿ ಸೋಮವಾರ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ 119 ರನ್‌ಗಳ ಗೆಲವು ಸಾಧಿಸಿದೆ...

ಕ್ರಿಸ್ಟ್‌ಚರ್ಚ್ : ವಿಶ್ವಕಪ್ ಪಂದ್ಯದಲ್ಲಿ ಸೋಮವಾರ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ 119 ರನ್‌ಗಳ ಗೆಲವು ಸಾಧಿಸಿದೆ. ಟಾಸ್ ಗೆದ್ದ ಸ್ಕಾಟ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಇಂಗ್ಲೆಂಡ್‌ಗೆ ಅನುಕೂಲವಾಯಿತು. ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‌ಗೆ ಮೊಯಿನ್ ಅಲಿ ಮತ್ತು ಬೆಲ್ ಜತೆಯಾಟ ಉತ್ತಮ ಆರಂಭವನ್ನು ನೀಡಿತು. ಇವರಿಬ್ಬರೂ ಸೇರಿ 172 ರನ್ ಕಲೆಹಾಕಿದ್ದರು. ಆರಂಭಿಕ ದಾಂಡಿಗ ಅಲಿ 128 ರನ್ ಗಳಿಸಿದರೆ ಬೆಲ್ 54 ರನ್ ಗಳಿಸಿದರು. ಬ್ಯಾರಿಂಗ್ಟನ್ ಬಾಲ್‌ಗೆ ಬೆಲ್ ಕ್ಯಾಚಿತ್ತು ಪೆವಿಲಿಯನ್‌ಗೆ ನಡೆದಾಗ ಅಲಿ ಜತೆಯಾದ್ದದು ಬಲ್ಲಾನ್. ಬೆಲ್ ಹೊರ ನಡೆದು ಮೂರು ಓವರ್‌ಗಳ ನಂತರ ಅಲಿ ಕೂಡಾ ವಿಕೆಟ್ ಕಳೆದುಕೊಂಡರು. ಇಂಗ್ಲೆಂಡ್ ಪರವಾಗಿ ಬಲ್ಲಾನ್ಸ್ (10), ರೂಟ್ (1), ಮೋರ್ಗನ್ (46), ಟೈಲರ್ (17). ಬಟ್ಲಪ್ (24). ವೋಕೆಸ್ (1), ಬ್ರೋಡ್ (0) ಹಾಗೂ ಫಿನ್ನ್ (1) ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 303 ರನ್‌ಗಳಿಸಿತ್ತು. ಈ ಮೊತ್ತವನ್ನು ಬೆನ್ನೆತ್ತಿದ ಸ್ಕಾಟ್ಲೆಂಡ್ 42.2 ಓವರ್‌ಗಳಲ್ಲಿ 184 ರನ್‌ಗಳಿಸಿ ಆಲೌಟ್ ಆಯ್ತು. ಈ ಮೂಲಕ ಇಂಗ್ಲೆಂಡ್ ಪ್ರಸ್ತುತ ವಿಶ್ವಕಪ್ ಪಂದ್ಯದಲ್ಲಿ ಮೊದಲ ಜಯ ಸಾಧಿಸಿದೆ.
ಸ್ಕಾಟ್ಲೆಂಡ್‌ನ ಕೆಯಲ್ ಕೋಯೆಟ್ಜರ್ (71) ಅತೀ ಹೆಚ್ಚು ರನ್ ಗಳಿಸಿ ತಮ್ಮ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಿದ್ದಾರೆ. ಆರಂಭದಲ್ಲಿ ಅಬ್ಬರಿಸಿದ ಕೆಯಲ್ ಮೋಯಿನ್ ಅಲಿಯ ಬಾಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಮರಳಿದಾಗ ನಂತರ ಬಂದ ಆಟಗಾರರು ಯಾರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸ್ಕಾಟ್ಲೆಂಡ್ ಪರ ಮ್ಯಾಕ್‌ಲಿಯೋಡ್ (4), ಕೊಲೆಮೆನ್ (7), ಮಾಚನ್ (5), ಮೋಮ್ಸೆನ್ (26) ಬೆರ್ರಿಂಗ್ಟನ್ (8), ಕ್ರಾಸ್ (23), ಡಾವೇ (9), ಹಕ್ (15) ಹಾಗೂ ಇವಾನ್ (9) ರನ್ ಗಳಿಸಿದ್ದಾರೆ. ಕೊನೆಯ ಆಟಗಾರ ವಾರ್ಲಾವ್ ಎರಡು ಬಾಲ್‌ಗಳನ್ನೆದುರಿಸಿದರೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


