ರಾಜ್ಯದ ತ್ವಿಶಾಗೆ ಕಯಕಿಂಗ್ ಚಿನ್ನ
ಕರ್ನಾಟಕದ ಕೆನಾಯ್ ಕಯಕಿಂಗ್ ಕ್ರೀಡಾಪಟು ತ್ವಿಶಾ.ಕೆ ಗಮನಾರ್ಹ ಪ್ರದರ್ಶನ ನೀಡಿದ್ದು...

ತಿರುವನಂತಪುರ: ಕರ್ನಾಟಕದ ಕೆನಾಯ್ ಕಯಕಿಂಗ್ ಕ್ರೀಡಾಪಟು ತ್ವಿಶಾ.ಕೆ ಗಮನಾರ್ಹ ಪ್ರದರ್ಶನ ನೀಡಿದ್ದು, 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಇದರ ಜತೆಗೆ ಇದೇ ಕ್ರೀಡೆಯಲ್ಲಿ ಎರಡು ಕಂಚಿನ ಪದಕ ಲಭಿಸಿದೆ.
ಸೋಮವಾರದ ದಿನದಾಟದಲ್ಲಿ ತ್ವಿಶಾ ಕೆ, 1000ಮೀ. ಮಹಿಳೆಯರ ಸಿಂಗಲ್ಸ್ ಕಯಕಿಂಗ್‍ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 04:35.00ನಿಮಿಷದಲ್ಲಿ ಗುರಿ ಮುಟ್ಟಿದ ತ್ವಿಶಾ ಅಗ್ರಸ್ಥಾನಿಯಾದರು.
ಇನ್ನು 1000 ಮೀ. ಪುರುಷರ ಡಬಲ್ ಕಯಕಿಂಗ್‍ನಲ್ಲಿ ಪವನ್ ಕುಮಾರ್ ಎಸ್. ವಾಗ್ಮೋರ್ ಹಾಗೂ ರಘು ಮಧು 03:43.00 ನಿಮಿಷದಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಹಾಗಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಪುರುಷರ 1000 ಮೀ. ಫೋರ್ ಕಯಕಿಂಗ್ ನಲ್ಲಿ ಭಾರತಿ ಪನೀರ್‍ಸೆಲ್ವಂ, ರಾಜಮಣಿ ಕನಕರಾಜ್, ಸುಗಂಧನ್ ಗೋವಿಂದರಾಜ್, ವೆಂಕಟೇಶ್ (03:22.00 ನಿಮಿಷ) ಮೂರನೇ ಸ್ಥಾನ ಪಡೆದು ಕಂಚಿಗೆ ಕೊರಳೊಡ್ಡಿದರು.
ಸೋಮವಾರ ಅಥ್ಲೆಟಿಕ್ಸ್ ಸ್ಪರ್ಧೆಗಳು ಆರಂಭವಾಗಿದ್ದು, ಕರ್ನಾಟಕದ ಅಭಿಷೇಕ್ ಎನ್ ಶೆಟ್ಟಿ ಉತ್ತಮ ಪ್ರದರ್ಶನ ತೋರಿದ್ದಾರೆ. ಪುರುಷರ ಡೆಕಥ್ಲಾನ್ ವಿಭಾಗದ 100 ಮೀ. ಓಟ (771), ಲಾಂಗ್‍ಜಂಪ್ (750), ಶಾಟ್‍ಪಟ್ (642)ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಗಮನ ಸೆಳೆದರು. ಈ ಮೂಲಕ ರಾಜ್ಯಕ್ಕೆ 4ಚಿನ್ನ, 14 ಬೆಳ್ಳಿ, 16 ಕಂಚು ಸೇರಿದಂತೆ ಒಟ್ಟು 34 ಪದಕಗಳು ಬಂದಿವೆ. ಪದಕ ಪಟ್ಟಿಯಲ್ಲಿ ಕರ್ನಾಟಕ 15ನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


