ಸ್ಕ್ವಾಷ್ ತಂಡಕ್ಕೆ ಸಂಚಿಕಾ ಅಲಭ್ಯ
ಮುಂದಿನ ವರ್ಷ ಫೆಬ್ರವರಿಯಲ್ಲಿ ಗುವಾಹತಿ ಮತ್ತು ಶಿಲ್ಲಾಂಗ್‍ನಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ಕ್ರೀಡಾಕೂಟಕ್ಕೆ ಭಾರತ ಸ್ಕ್ವಾಷ್ ತಂಡವನ್ನು ಪ್ರಕಟಿಸಲಾಗಿದ್ದು...

ಚೆನ್ನೈ: ಮುಂದಿನ ವರ್ಷ ಫೆಬ್ರವರಿಯಲ್ಲಿ ಗುವಾಹತಿ ಮತ್ತು ಶಿಲ್ಲಾಂಗ್‍ನಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ಕ್ರೀಡಾಕೂಟಕ್ಕೆ ಭಾರತ ಸ್ಕ್ವಾಷ್ ತಂಡವನ್ನು ಪ್ರಕಟಿಸಲಾಗಿದ್ದು, ಪ್ರಮುಖ ಆಟಗಾರರಾದ ಸೌರವ್ ಘೋಶಾಲ್ ಮತ್ತು ಜೋಷ್ನಾ ಚಿನ್ನಪ್ಪ ಅವರನ್ನು ಒಳಗೊಂಡಿದೆ. ಫೆಬ್ರವರಿ 5ರಿಂದ 16ರವರೆಗೆ ನಡೆಯಲಿರುವ ಸ್ಪರ್ಧೆಗೆ ಶನಿವಾರ ತಂಡವನ್ನು ಪ್ರಕಟಿಸಲಾಯಿತು.
ಈ ತಂಡದಲ್ಲಿ ಹೆಚ್ಚಿನ ಬದಲಾವಣೆ ತರದಿದ್ದರೂ, ಪ್ರಮುಖ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಅನಾರೋಗ್ಯದಿಂದ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸದ ಮಹೇಶ್ ಮಂಗಾವ್‍ಕರ್ ಆನಂತರ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ ಎಂದು ಎಸ್‍ಆರ್‍ಎಫ್ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಮಹಿಳೆಯರ ವಿಭಾಗದಲ್ಲಿ ಹಿರಿಯ ಆಟಗಾರ್ತಿ ಸಂಚಿಕ ಇಂಗ್ಲೆ ಅವರನ್ನು ತಂಡದಿಂದ ಕೈಬಿಟ್ಟಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಸಂಚಿಕ ಇತರೆ ಆಟಗಾರ್ತಿಯರಾದ ಸುನನ್ಯಾ ಮತ್ತು ಆಕಾಂಕ್ಷೆ ಅವರಿಗಿಂತ ಉನ್ನತ ರ್ಯಾಂಕಿಂಗ್ ಹೊಂದಿದ್ದಾರೆ. ಆದರೆ ಆಯ್ಕೆ ಟ್ರಯಲ್ಸ್‍ನಲ್ಲಿ ಈ ಇಬ್ಬರು ಯುವ ಆಟಗಾರ್ತಿಯರು ಸಂಚಿಕ ಅವರಿಗಿಂತ ಉತ್ತಮ ಪ್ರದರ್ಶನ ನೀಡಿದ್ದರು.
ಭಾರತ ತಂಡ: ಪುರುಷರು: ಸೌರವ್ ಘೋಶಾಲ್, ಹರಿಂದರ್ ಪಾಲ್ ಸಂಧು, ಕುಶ್ ಕುಮಾರ್ ಮತ್ತು ರವಿ ದೀಕ್ಷಿತ್ ಮಹಿಳೆಯರು: ಜೋಷ್ನಾ ಚಿನ್ನಪ್ಪ, ದೀಪಿಕಾ ಪಳ್ಳಿಕಲ್, ಸುನನ್ಯಾ ಕುರುವಿಲ್ಲಾ ಮತ್ತು ಆಕಾಂಕ್ಷ ಸಲುಂಖೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


