ಮೈಕೆಲ್ ಶುಮಾಕರ್ ಚೇತರಿಕೆ?
ಎರಡು ವರ್ಷಗಳಿಂದ ಕೋಮಾದಲ್ಲಿರುವ ಎಫ್ 1 ಕ್ರೀಡೆಯ ಮಾಜಿ ವಿಶ್ವ ಚಾಂಪಿಯನ್ ಮೈಕಲ್ ಶುಮಾಕರ್ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಾಣಿಸಿಕೊಂಡಿರುವ ಬಗ್ಗೆ ವರದಿ ಜರ್ಮನಿಯ ನಿಯತಕಾಲಿಕೆ...

ಬರ್ಲಿನ್: ಕಳೆದ ಎರಡು ವರ್ಷಗಳಿಂದ ಕೋಮಾದಲ್ಲಿರುವ ಎಫ್ 1 ಕ್ರೀಡೆಯ ಮಾಜಿ ವಿಶ್ವ ಚಾಂಪಿಯನ್ ಮೈಕಲ್ ಶುಮಾಕರ್ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಾಣಿಸಿಕೊಂಡಿರುವ ಬಗ್ಗೆ ವರದಿ ಜರ್ಮನಿಯ ನಿಯತಕಾಲಿಕೆ `ಬಂಟೆ' ವರದಿ ಮಾಡಿದೆ.
ಶುಮಾಕರ್ ಚೇತರಿಸಿಕೆಯ ಹಾದಿ ಹಿಡಿದಿದ್ದು ಅಲ್ಪ ಪ್ರಮಾಣದಲ್ಲಿ ಅವರು ಕೈ ಕಾಲುಗಳನ್ನು ಆಡಿಸುತ್ತಿದ್ದು, ಶೀಘ್ರದಲ್ಲೇ ನಡೆದಾಡಬಲ್ಲರು ಎಂದು ಹೇಳಿದೆ. ಆದರೆ ಈ ವರದಿಯನ್ನು ಶುಮಾಕರ್ ಅವರ ವಕ್ತಾರ ಸಬೀನ್ ಖೆಮ್ ಅಲ್ಲಗಳೆದಿದ್ದಾರೆ. 2013ರಲ್ಲಿ ತಮ್ಮ ಕುಟುಂಬದೊಡನೆ ಪ್ರವಾಸಕ್ಕೆ ತೆರಳಿದ್ದ ವೇಳೆ ಸ್ಕೀಯಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಶುಮಾಕರ್ ಮಾರಣಾಂತಿಕವಾಗಿ ಗಾಯಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


