ಕ್ರೀಡೆ

ಆಸ್ಟ್ರೇಲಿಯಾ ಪ್ರವಾಸ ಪಂದ್ಯಕ್ಕೆ ಯುವಿ ಆಯ್ಕೆಯಾಗುವ ಸಾಧ್ಯತೆ ಇಲ್ಲ: ಸೌರವ್

ಯುವರಾಜ್ ಸಿಂಗ್ ಇನ್ಮುಂದೆ ಟೀಂ ಇಂಡಿಯಾಗೆ ಮರಳುವ ಸಾಧ್ಯತೆಯಿಲ್ಲ ಎಂದು ಭಾರತೀಯ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ...

ಆಸ್ಟ್ರೇಲಿಯಾ ಪ್ರವಾಸ ಪಂದ್ಯಕ್ಕೆ ಯುವಿ ಆಯ್ಕೆಯಾಗುವ ಸಾಧ್ಯತೆ ಇಲ್ಲ: ಸೌರವ್
ಸೌರವ್ ಗಂಗೂಲಿ ಜತೆ ಯುವರಾಜ್ ಸಿಂಗ್
Published On :
ನವದೆಹಲಿ: ಯುವರಾಜ್ ಸಿಂಗ್ ಇನ್ಮುಂದೆ ಟೀಂ ಇಂಡಿಯಾಗೆ ಮರಳುವ ಸಾಧ್ಯತೆಯಿಲ್ಲ ಎಂದು ಭಾರತೀಯ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಆಸ್ಟೇಲಿಯಾ ಪ್ರವಾಸ ಪಂದ್ಯಕ್ಕಾಗಿ ಭಾರತೀಯ ತಂಡದ ಆಯ್ಕೆ ಬಗ್ಗೆ ಸಭೆ ಸೇರುವ ಮುನ್ನ ಗಂಗೂಲಿ ಈ ಮಾತನ್ನು ಹೇಳಿದ್ದಾರೆ.
ಕಳೆದ ವರ್ಷ ಐಸಿಸಿ ವಿಶ್ವ ಟಿ 20ಯಲ್ಲಿ ಯುವರಾಜ್ ಆಡಿದ್ದರು. ತದನಂತರ ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಪ್ರಾದೇಶಿಕ ಕ್ರಿಕೆಟ್ ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿದ್ದರು. ಈ ನಿಟ್ಟಿನಲ್ಲಿ ಯುವರಾಜ್ ಮತ್ತೆ ಟೀಂ ಇಂಡಿಯಾಗೆ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಕ್ರಿಕೆಟ್ ಅಭಿಮಾನಿಗಳೂ ಯುವರಾಜ್‌ನ ಸಾನಿಧ್ಯ ಬಯಸಿದ್ದರು.
ಈ ಬಗ್ಗೆ ಮಾತನಾಡಿದ ಸೌರವ್, ಯುವಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಆಯ್ಕೆಗಾರರು ಆಸ್ಟ್ರೇಲಿಯಾದಲ್ಲಿ ನಡೆದ 2015ರ ವಿಶ್ವಕಪ್‌ಗೇ ಅವರನ್ನು ಆಯ್ಕೆ ಮಾಡದಿರುವಾಗ ಅದೇ ದೇಶದಲ್ಲಿ ನಡೆಯಲಿರುವ ಪ್ರವಾಸ ಪಂದ್ಯಕ್ಕೂ ಆತನನ್ನು ಆಯ್ಕೆ ಮಾಡುವ ಸಾಧ್ಯತೆಯಿಲ್ಲ ಎಂದು ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.
2000 ಇಸವಿಯಲ್ಲಿ ಸೌರವ್ ಗಂಗೂಲಿ ನಾಯಕನಾಗಿದ್ದಾಗ ಯುವರಾಜ್ ಟೀಂ ಇಂಡಿಯಾ ಸೇರ್ಪಡೆಯಾಗಿದ್ದರು. ಯುವರಾಜ್ ಈಗಲೂ ಒಳ್ಳೆಯ ಫಾರ್ಮ್‌ನಲ್ಲೇ ಇದ್ದರೂ ಆಯ್ಕೆಗಾರರು ಬೌಲರ್‌ಗಳತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
ಟೀಂ ಇಂಡಿಯಾ ಈಗ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿಲ್ಲ, ಬದಲಾಗಿ ಬೌಲರ್‌ಗಳ ಕೊರತೆ ಇದೆ. ಆದ್ದರಿಂದಲೇ ಆಯ್ಕೆಗಾರರು ಉತ್ತಮ ಬೌಲರ್‌ಗಳ ಹುಡುಕಾಟದಲ್ಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.