ಕ್ರೀಡೆ

ಸೆಮೀಸ್ ಗೆ ಕಾಲಿಟ್ಟ ಕರ್ನಾಟಕ

ವೆಸ್ಲಿ, ಸ್ಟೀವ್ ಹ್ಯಾನ್ಸನ್ ಮತ್ತು ಅರುಣ್ ಪಾಂಡೆ ಅವರ ತಲಾ ಒಂದು ಗೋಲಿನ ಬಲದಿಂದ ಕಂಗೊಳಿಸಿದ ಕರ್ನಾಟಕ ತಂಡ, 29ನೇ ಅಖಿಲ ಭಾರತ ಪೋಸ್ಟಲ್...

ಸೆಮೀಸ್ ಗೆ ಕಾಲಿಟ್ಟ ಕರ್ನಾಟಕ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ವೆಸ್ಲಿ, ಸ್ಟೀವ್ ಹ್ಯಾನ್ಸನ್ ಮತ್ತು ಅರುಣ್ ಪಾಂಡೆ ಅವರ ತಲಾ ಒಂದು ಗೋಲಿನ ಬಲದಿಂದ ಕಂಗೊಳಿಸಿದ ಕರ್ನಾಟಕ ತಂಡ,  29ನೇ ಅಖಿಲ ಭಾರತ ಪೋಸ್ಟಲ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಬಗ್ಗು ಬಡಿದು ಉಪಾಂತ್ಯ ಪ್ರವೇಶಿಸಿದೆ.

ಅಶೋಕ ನಗರದಲ್ಲಿರುವ ರಾಜ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 'ಬಿ' ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡ 3-0 ಗೋಲುಗಳಿಂದ ಪಶ್ಚಿಮ ಬಂಗಾಳ ತಂಡವನ್ನು ಸೋಲಿಸಿತು.

ಪಂದ್ಯದ ಮೊದಲಾರ್ಧಲ್ಲೇ ಆಕ್ರಮಣಕಾರಿ ಆಟಕ್ಕಿಳಿದ ರಾಜ್ಯದ ಆಟಗಾರರು ವಿರಾಮಕ್ಕೂ ಮುನ್ನ ಎರಡು ಗೋಲು ಬಾರಿಸಿದರು. ವೆಸ್ಲಿ (20ನೇ ನಿ.), ಅರುಣ್ ಪಾಂಡಿ (28ನೇ ನಿ.) ತಲಾ ಒಂದು ಗೋಲು ತಂದು 2-0 ಅಂತರದಲ್ಲಿ ಆತಿಥೇಯರಿಗೆ ಮುನ್ನಡೆ ಒದಗಿಸಿದರು. ನಂತರ ದ್ವಿತೀಯಾರ್ಧಲ್ಲೂ ಮಿಂಚಿದ ರಾಜ್ಯ ತಂಡಕ್ಕೆ ಸ್ಟೀವ್ ಹ್ಯಾನ್ಸನ್(47ನೇ ನಿ.) ಒಂದು ಗೋಲು ಬಾರಿಸಿ ಜಯದ ಅಂತರವನ್ನು ವಿಸ್ತರಿಸಿದರು.

ಎ ಗುಂಪಿನಲ್ಲಿ ಒಡಿಶಾ ತಂಡ 4-1 ಗೋಲುಗಳಿಂದ ಅಸ್ಸಾಂ ತಂಡವನ್ನು ಮಣಸಿ ಸೆಮಿಫೈನಲ್ ತಲುಪಿತು. ವಿಜೇತ ತಂಡದ ಪರ ಮಾಶ್‌ಕುಮಾರ್ ಸಾಹು (50, 55, 70ನೇ.) ಹ್ಯಾಟ್ರಿಕ್ ಗೋಲು ದಾಖಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.