ಇಂಡಿಯನ್ ಏಸಸ್ ಶುಭಾರಂಭ
ದ್ವಿತೀಯ ಆವೃತ್ತಿಯ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಟೂರ್ನಿಯಲ್ಲಿನ ತನ್ನ ಮೊದಲ ಅಭಿಯಾನದಲ್ಲಿ ಹಾಲಿ ಚಾಂಪಿಯನ್ ಇಂಡಿಯನ್ ಏಸಸ್...

Published On :
ಕೋಬ್(ಜಪಾನ್): ದ್ವಿತೀಯ ಆವೃತ್ತಿಯ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಟೂರ್ನಿಯಲ್ಲಿನ ತನ್ನ ಮೊದಲ ಅಭಿಯಾನದಲ್ಲಿ ಹಾಲಿ ಚಾಂಪಿಯನ್ ಇಂಡಿಯನ್ ಏಸಸ್ ತಂಡ, 25-24 ಅಂಕಗಳಿಂದ, ಜಪಾನ್ ವಾರಿಯರ್ಸ್ ತಂಡವನ್ನು ಮಣಿಸಿತು.
ಬುಧವಾರ ಆರಂಭವಾದ ಪಂದ್ಯಾವಳಿಯಲ್ಲಿ ದಿನದ ಮೊದಲ ಮುಖಾಮುಖಿಯಲ್ಲಿ ಯುಎಇ ರಾಯಲ್ಸ್ ಹಾಗೂ ಸಿಂಗಾಪುರ ಸ್ಲಾಮರ್ಸ್ ಸೆಣಸಿದ್ದವು. ಐದು ಸುತ್ತುಗಳ ಆ ಮುಖಾಮುಖಿಯಲ್ಲಿ ರಾಯಲ್ಸ್ ತಂಡ, ಸಿಂಗಾಪುರ ತಂಡವನ್ನು 26-20 ಅಂಕಗಳ ಅಂತರದಲ್ಲಿ ಮಣಿಸಿತು. ಇನ್ನು, ದ್ವಿತೀಯ ಮುಖಾಮುಖಿಯಲ್ಲಿ ಕಣಕ್ಕಿಳಿದಿದ್ದ ಭಾರತ, ಮೊದಲು ನಡೆದ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಅಚ್ಚರಿಯ ಸೋಲು ಕಂಡಿತು.
ಜಪಾನ್‍ನ ಮಾರಿಯಾ ಶರಪೋವಾ ಹಾಗೂ ಹರ್ಬರ್ಟ್ ವಿರುದ್ಧ ಸೆಣಸಿದ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ, 5-6 ಅಂತರದಲ್ಲಿ ಸೋಲು ಕಂಡಿತು! ಆನಂತರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ, ಏಸಸ್‍ನ ಸಮಂತಾ ಸ್ಟಾಸರ್, ವಾರಿಯರ್ಸ್ ಮಾರಿಯಾ ಶರಪೋವಾ ವಿರುದ್ಧ 4-6 ಅಂತರದ ಸೋಲು ಕಂಡರು. ಇದಾದ ಮೇಲೆ ನಡೆದ, ಪುರುಷರ ಸಿಂಗಲ್ಸ್‍ನಲ್ಲಿ ಏಸಸ್‍ನ ಫ್ಯಾಬ್ರಿಸ್ ಸ್ಯಾಂಟೊರೊ, ಮರಾಟ್ ಸಾಫಿನ್ ವಿರುದ್ಧ 6-2 ಅಂತರದಲ್ಲಿ ಗೆಲವು ದಾಖಲಿಸಿದರು.
ಇತ್ತಂಡಗಳ ಪುರುಷರ ಡಬಲ್ಸ್‍ನಲ್ಲಿ ಏಸಸ್‍ನ ಮೊನ್ ಫಿಸ್-ಬೋಪಣ್ಣ ಜೋಡಿ, ನಿಶಿಕೋರಿ-ಹರ್ಬರ್ಟ್ ಜೋಡಿ ವಿರುದ್ಧ 6-4ರ ಜಯ ದಾಖಲಿಸಿತು. ಅಂತಿಮ ಸುತ್ತಿನಲ್ಲಿ, ಏಸಸ್‍ನ ಗೇಲ್ ಮೊನ್ ಫಿಸ್ ಅವರು, ಸ್ಥಳೀಯ ಆಟಗಾರ ಕಿಯ್ ನಿಶಿಕೋರಿ ವಿರುದ್ಧ 4-6 ಅಂತರದ ಸೋಲು ಕಂಡರು. ಹೀಗೆ, ಐದು ಸುತ್ತುಗಳಲ್ಲಿ ಏಸಸ್ ತಂಡ ಕೇವಲ 2 ಅಂಕ ದಾಖಲಿಸಿತಾದರೂ ಅಂಕಗಳ ಆಧಾರದಲ್ಲಿ 25-24 ಅಂತರದ ಜಯ ಸಾಧಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


