ಕೊಲಂಬೊ ಟೆಸ್ಟ್: ಲಂಕಾ ವಿರುದ್ಧ ಪೂಜಾರ ಶತಕ
ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಶತಕ ಸಿಡಿಸಿದ್ದಾರೆ...

Published On :
ಕೊಲಂಬೊ: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಶತಕ ಸಿಡಿಸಿದ್ದಾರೆ.
ಸಿಂಹಳೀಸ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಿನ್ನೆ ಆರಂಭವಾದ ಅಂತಿಮ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ಬ್ಯಾಟಿಂಗ್ ಆರಂಭಿಸಿತು. ಮಳೆ ಅಡ್ಡಿ ಹಿನ್ನೆಲೆ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿತ್ತು.
ಎರಡನೇ ದಿನ ಕಣಕ್ಕೀಳಿದ ಭಾರತ ಪರ ಚೇತೇಶ್ವರ ಪೂಜಾರ ಉತ್ತಮವಾಗಿ ಆಟವಾಡುತ್ತಿದ್ದು, 129 ರನ್ ಗಳಿಸಿ ಅಜೇಯರಾಗಿದ್ದಾರೆ.
ಕರ್ನಾಟಕದ ಕೆಎಲ್ ರಾಹುಲ್ 2, ರಹಾನೆ 8, ವಿರಾಟ್ ಕೊಹ್ಲಿ 18, ಶರ್ಮಾ 26, ಸ್ಟುವರ್ಟ್ ಬಿನ್ನಿ 0, ನಮನ್ ಓಜಾ 21, ಆರ್ ಅಶ್ವಿನ್ 5 ಅಮೀತ್ ಮಿಶ್ರ 59 ರನ್ ಗಳಿಸಿ ಔಟಾಗಿದ್ದಾರೆ. ಟೀಂ ಇಂಡಿಯಾ 94 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ.
ಲಂಕಾ ಪರ ಧಮ್ಮಿಕಾ ಪ್ರಸಾದ್ 4, ಪ್ರದೀಪ್, ಮ್ಯಾಥ್ಯೂಸ್, ಹೇರಾತ್, ಕೌಶಲ್ ತಲಾ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


