ಭಾರತದಲ್ಲಿ ಮೊದಲ ವೇಟ್ ಲಿಫ್ಟಿಂಗ್ ಕೂಟ
ಭಾರತದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಡೆಸಲು ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 11ರಿಂದ 15ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಯೂತ್, ಜೂನಿಯರ್ ಹಾಗೂ ಸೀನಿಯರ್ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ಗೆ ಪುಣೆ ಆತಿಥ್ಯ ವಹಿಸಲಿದೆ...

ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಡೆಸಲು ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 11ರಿಂದ 15ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಯೂತ್, ಜೂನಿಯರ್ ಹಾಗೂ ಸೀನಿಯರ್ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ಗೆ ಪುಣೆ ಆತಿಥ್ಯ ವಹಿಸಲಿದೆ.
ಈ ಕ್ರೀಡಾಕೂಟದಲ್ಲಿ ಭಾರತದ 40 ವೇಟ್‍ಲಿಫ್ಟರ್‍ಗಳು ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ, ಥಾಯ್ ಲ್ಯಾಂಡ್‍ನ ಫಾಕೆಟ್ ನಲ್ಲಿ ನಡೆಯಲಿರುವ 25ನೇ ಮಹಿಳೆಯರ ಹಾಗೂ 46ನೇ ಪುರುಷರ (ಹಿರಿಯರ) ಏಷ್ಯನ್ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಐವರು ಪಾಲ್ಗೊಳ್ಳಲಿದ್ದಾರೆ. ಸೆ. 3ರಿಂದ 12ರವರೆಗೆ ಈ ಕ್ರೀಡಾಕೂಟ ನಡೆಯಲಿದೆ. ಇದೇ ಅವಧಿಯಲ್ಲಿ, ಸಮೋವಾದ ಅಪಿಯಾದಲ್ಲಿ ನಡೆಯಲಿರುವ 5ನೇ ಕಾಮನ್ವೆಲ್ತ್ ಯೂತ್ ಗೇಮ್್ಸನಲ್ಲಿ ಭಾರತದ ಇಬ್ಬರು ಕ್ರೀಡಾಳುಗಳು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


