ಎಲ್‍ಬಿ ಡಿಆರ್‍ಎಸ್‍ಗೆ ಭಾರತ ಒಪ್ಪದು: ಬಿಸಿಸಿಐ
ಟೆಸ್ಟ್ ಕ್ರಿಕೆಟ್‍ನಲ್ಲಿ ಬಳಸಲಾಗುತ್ತಿರುವ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆ (ಡಿಆರ್‍ಎಸ್)ನಲ್ಲಿ ಕೆಲವು ಬದಲಾವಣೆ ತರುವವರೆಗೂ ಭಾರತ ಈ ವ್ಯವಸ್ಥೆಯನ್ನು ಒಪ್ಪುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ...

ಬೆಂಗಳೂರು: ಟೆಸ್ಟ್ ಕ್ರಿಕೆಟ್‍ನಲ್ಲಿ ಬಳಸಲಾಗುತ್ತಿರುವ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆ (ಡಿಆರ್‍ಎಸ್)ನಲ್ಲಿ ಕೆಲವು ಬದಲಾವಣೆ ತರುವವರೆಗೂ ಭಾರತ ಈ ವ್ಯವಸ್ಥೆಯನ್ನು ಒಪ್ಪುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಈ ವ್ಯವಸ್ಥೆಯಲ್ಲಿ ಐಸಿಸಿ ಬದಲಾವಣೆ ತರುವುದೇ ಎಂಬುದನ್ನು ನೋಡುತ್ತೇವೆ. ಡಿಆರ್‍ಎಸ್‍ನಲ್ಲಿ ನೋಬಾಲ್, ಬ್ಯಾಟ್ ಪ್ಯಾಡ್ ಕ್ಯಾಚ್, ಮತ್ತು ಇತರೆ ರಿವ್ಯೂಗಳಲ್ಲಿ ಇನ್ನಷ್ಟು ಸುಧಾರಣೆ ತರಬಹುದಾಗಿದೆ. ಆದರೆ ಎಲ್‍ಬಿಡಬ್ಲ್ಯೂನಲ್ಲಿ ಡಿಆರ್‍ಎಸ್ ಅನ್ನು ಭಾರತ ಒಪ್ಪುವುದಿಲ್ಲ. ಈ ಕುರಿತು ನಾವು ಸಾಕಷ್ಟು ಅಸಮಾಧಾನ ಹೊಂದಿದ್ದೇವೆ. ಐಸಿಸಿ ನಿಖರ ವ್ಯವಸ್ಥೆ ತರುವವರೆಗೂ ಎಲ್ ಬಿಡಬ್ಲ್ಯೂಗೆ ಡಿಆರ್‍ಎಸ್ ಅನ್ನು ಒಪ್ಪುವುದಿಲ್ಲ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಎನ್‍ಸಿಎ ಸ್ಥಳಾಂತರ ಅನಿವಾರ್ಯ
ಇನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಸ್ಥಳಾಂತರಿಸುವ ಬಗ್ಗೆ ಮಾತನಾಡಿರುವ ಠಾಕೂರ್, ಬೇರೆ ರಾಜ್ಯ ಸರ್ಕಾರಗಳು ಈ ಸಂಸ್ಥೆ ನಿರ್ಮಿಸಲು ಉಚಿತವಾಗಿ ಭೂಮಿಯನ್ನು ನೀಡಲು ಮುಂದಾಗಿದೆ. ಆದರೆ, ಉಪೇಕ್ಷೆಯಿಂದಾಗಿ ಇಲ್ಲಿ ರು.50 ಕೋಟಿ ನೀಡಿದ್ದರೂ ಅಗತ್ಯ ಭೂಮಿ ಸಿಗುವುದು ಅನುಮಾನ. ಹಿಮಾಚಲ ಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಮುಂದೆ ಬಂದಿದ್ದು, ಕರ್ನಾಟಕ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


