ಸಾನಿಯಾಳಂತ ಪತ್ನಿ ಸಿಕ್ಕಿದ್ದು ನನ್ನ ಅದೃಷ್ಟ: ಶೋಯೆಬ್ ಮಲ್ಲಿಕ್
ಪಾಕಿಸ್ತಾನ ಕ್ರಿಕೆಟರ್ ಶೋಯಬ್ ಮಲಿಕ್ ರಾಷ್ಟ್ರೀಯ ತಂಡದಲ್ಲಿ ತಮ್ಮ ವೃತ್ತಿಜೀವನದ ಚೇತರಿಕೆಗೆ ಪತ್ನಿ ಹಾಗೂ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ...

ಕರಾಚಿ: ಪಾಕಿಸ್ತಾನ ಕ್ರಿಕೆಟರ್ ಶೋಯಬ್ ಮಲಿಕ್ ರಾಷ್ಟ್ರೀಯ ತಂಡದಲ್ಲಿ ತಮ್ಮ ವೃತ್ತಿಜೀವನದ ಚೇತರಿಕೆಗೆ ಪತ್ನಿ ಹಾಗೂ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಕ್ರೆಡಿಟ್ ನೀಡಿದ್ದಾರೆ. ಅವರ ಶ್ರಮ, ನಿಷ್ಠೆ ಮತ್ತು ವೃತ್ತಿಪರ ಅಥ್ಲೇಟ್ ಯಶಸ್ಸಿನಿಂದ ಉತ್ತೇಜಿತನಾದ ತಾನು ಆಟವನ್ನು ಸುಧಾರಿಸಿಕೊಂಡು ಯಶಸ್ವಿ ಕಮ್ಬ್ಯಾಕ್ ಆಗಿರುವುದಾಗಿ ಪತ್ನಿಯನ್ನು ಹೊಗಳಿದ್ದಾರೆ.
ಕೆಲವೊಮ್ಮೆ ತಂಡದ ಜೊತೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಮಾತನಾಡಲು ಸಾಧ್ಯವಾಗದ ಸಂದರ್ಭದಲ್ಲಿ ಸಾನಿಯಾಳ ಜತೆ ಇರುವುದು ಅದೃಷ್ಟವಾಗಿದೆ. ಕ್ರೀಡಾಪಟುವಿನ ಮಟ್ಟದಲ್ಲಿ ಅವಳಿಂದ ಉತ್ತಮ ಸಲಹೆ ಪಡೆಯುವ ಮೂಲಕ ಅಗತ್ಯವಾದ ಚೈತನ್ಯ ನೀಡುತ್ತಾಳೆ ಎಂದು ಮಲಿಕ್ ಹೇಳಿದ್ದಾರೆ.
ಟೆನ್ನಿಸ್ ನಲ್ಲಿ ಯಶಸ್ಸಿಗಾಗಿ ಸಾನಿಯಾ ಎಷ್ಟು ಕಷ್ಟಪಟ್ಟಿದ್ದಾಳೆಂದು ನನಗೆ ಗೊತ್ತು. ಕ್ರಿಕೆಟ್ನಲ್ಲಿ ಕೂಡ ಅದೇ ರೀತಿ ಮಾಡಲು ನನ್ನನ್ನು ಪ್ರೇರೇಪಿಸಿತು. ಆದ್ದರಿಂದ ನಾನು ಪಾಕಿಸ್ತಾನ ತಂಡಕ್ಕೆ ಯಶಸ್ವಿ ಕಮ್ಬ್ಯಾಕ್ ಆಗಿದ್ದರಿಂದ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು. ತಮ್ಮ ಪತ್ನಿ ಕ್ರೀಡಾಂಗಣದಲ್ಲಿ ಹಾಜರಿದ್ದಾಗ ತಾವು ಯಶಸ್ಸು ಗಳಿಸಬೇಕೆಂಬ ಒತ್ತಡ ತನ್ನ ಮೇಲಿರುತ್ತದೆ ಎಂದು ಹೇಳಿದ್ದಾರೆ. ನಾನು ಟಾಪ್ ಆಲ್ರೌಂಡರ್ ಆಗಲು ಬಯಸಿದ್ದು, ಅದು ನನ್ನ ಗುರಿಯಾಗಿದೆ. ಹಿಂದೆ ನಾನು ತಪ್ಪುಗಳನ್ನು ಮಾಡಿದ್ದು ಅದಕ್ಕೆ ವಿಷಾದಿಸುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


