ವಾಪಸ್

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!
ಇದು ಎರಡು ವರ್ಷಗಳಿಂದ ನಡೆಯುತ್ತಿತ್ತು, ಆದರೆ ಈಗ ಅಂತಿಮವಾಗಿ ಮುಕ್ತಾಯಗೊಂಡಿದೆ. ಇಂದು ಸುನೀತಾ ಅವರು ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ಹಿಂಪಡೆಯುವ ಅರ್ಜಿ ಸಲ್ಲಿಸಿದ್ದಾರೆ ಎಂದು ಶಶಿ ಸಿನ್ಹಾ ತಿಳಿಸಿದ್ದಾರೆ.

TVK ವಿಜಯ್ ಗೆ ಮತ್ತೊಂದು ಹಿನ್ನಡೆ: ರಾತ್ರೋರಾತ್ರಿ ದಳಪತಿಗೆ ನೀಡಿದ್ದ ಭದ್ರತೆ ವಾಪಸ್!
ವಿಜಯ್ ಅವರಿಗೆ 4 ಬೆಂಗಾವಲು ಭದ್ರತಾ ವಾಹನಗಳನ್ನ ಒಳಗೊಂಡ ಪೊಲೀಸ್ ರಕ್ಷಣೆಯನ್ನು ಒದಗಿಸಲಾಯಿತು. 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಭದ್ರತಾ ಕರ್ತವ್ಯದಲ್ಲಿ ಭಾಗಿಯಾಗಿದ್ದರು.

ಬಫರ್ ಝೋನ್ ಕಡಿತ ಮಸೂದೆ ವಾಪಸ್: ಸರ್ಕಾರದಿಂದ ಸ್ಪಷ್ಟೀಕರಣ ಕೇಳಿದ ರಾಜ್ಯಪಾಲ ಗೆಹ್ಲೋಟ್
ಕೆರೆಗಳ ಬಫರ್ ಝೋನ್ ಅನ್ನು 30 ಮೀಟರ್‌ಗೆ ಇಳಿಸುವುದರಿಂದ ಬೆಂಗಳೂರಿನ ನೀರಿನ ಭದ್ರತೆ ಮತ್ತು ಪರಿಸರ ವ್ಯವಸ್ಥೆಯ ಸಮಗ್ರತೆಗೆ ಅಪಾಯ ಉಂಟಾಗಲಿದೆ.

ಕ್ಯಾಬಿನ್‌ನಲ್ಲಿ ಸುಟ್ಟ ವಾಸನೆ: ಚೆನ್ನೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈಗೆ ವಾಪಸ್!
ಶನಿವಾರ ಚೆನ್ನೈಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ನಲ್ಲಿ ಸುಟ್ಟ ವಾಸನೆ ಕಂಡುಬಂದಿದೆ. ತದನಂತರ ಮುಂಬೈಗೆ ವಿಮಾನ ಮರಳಬೇಕಾಯಿತು.

IPL 2025: ಪ್ಲೇ-ಆಫ್ ಗೂ ಮುನ್ನ RCB ಗೆ ಜೋಶ್ ಹೇಜಲ್‌ವುಡ್ ವಾಪಸ್!
ಭುಜ ನೋವಿನಿಂದ ಗುಣಮುಖರಾಗಿರುವ ತಂಡದ ಪ್ರಮುಖ ವೇಗದ ಬೌಲರ್ ಹ್ಯಾಜಲ್ ವುಡ್ ಏಪ್ರಿಲ್ 27ರಂದು ಕೊನೆಯದಾಗಿ ಆಡಿದ್ದರು.

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಯಶಸ್ವಿ; ಲಾರಿ ಮುಷ್ಕರ ವಾಪಸ್
ಬಹುತೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಮುಷ್ಕರವನ್ನು ಹಿಂಪಡೆದಿದ್ದಾರೆ.

ದಾವಣಗೆರೆ: ಆಫ್ರಿಕಾದ ಗ್ಯಾಬೊನ್‌ನಿಂದ ಹಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗ ರಾಜ್ಯಕ್ಕೆ ಸುರಕ್ಷಿತವಾಗಿ ವಾಪಸ್
ಹಕ್ಕಿ-ಪಿಕ್ಕಿ ಸಮುದಾಯವು ಗಿಡಮೂಲಿಕೆ ಕೂದಲಿನ ಎಣ್ಣೆಗಳು ಮತ್ತು ಆಯುರ್ವೇದ ಔಷಧಿಗಳಂತಹ ಬುಡಕಟ್ಟು ಉತ್ಪನ್ನಗಳನ್ನು ಮಾರಾಟ ಮಾಡಲು ವಿದೇಶಗಳಿಗೆ ಪ್ರಯಾಣಿಸುವ ದೀರ್ಘಕಾಲದ ಸಂಪ್ರದಾಯವನ್ನು ಹೊಂದಿದೆ.

ಹೋರಾಟಕ್ಕೆ ಮಣಿದ BMRCL: ಕನ್ನಡೇತರರ ನೇಮಕಾತಿ ಅಧಿಸೂಚನೆ ವಾಪಸ್ ಪಡೆದ ನಮ್ಮ ಮೆಟ್ರೋ
ಗುತ್ತಿಗೆ ಆಧಾರದ ಮೇಲೆ 50 ಟ್ರೈನ್ ಆಪರೇಟರ್ ಹುದ್ದೆಗಳ ನೇಮಕಾತಿಗೆ ಮೆಟ್ರೋ ಮುಂದಾಗಿತ್ತು. ಹೀಗಾಗಿ BMRCL ಕಚೇರಿ ಮುಂದೆ ಕನ್ನಡಪರ ಹೋರಾಟಗಾರರು ಧರಣಿ ಮಾಡಿದ್ದರು.

ಬೆಳಗಾವಿ ಕಂಡಕ್ಟರ್ ವಿರುದ್ಧದ POCSO ಕೇಸ್ ವಾಪಸ್: ನಾವೂ ಕನ್ನಡಿಗರೇ ಎಂದ ಸಂತ್ರಸ್ತ ಬಾಲಕಿಯ ತಾಯಿ
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತ ಬಾಲಕಿಯ ತಾಯಿ, ಯಾವುದೇ ಒತ್ತಡ ಇಲ್ಲದೆ ಕಂಡಕ್ಟರ್ ಮಹದೇವಪ್ಪ ವಿರುದ್ದ ನೀಡಿದ್ದ ಪೋಕ್ಸೋ ಕೇಸ್ ವಾಪಸ್ ಪಡೆದಿದ್ದೇವೆಂದು ಹೇಳಿದ್ದಾರೆ.

