ಭಾರತವನ್ನು ಮೇಲೆತ್ತಿದ ರಾಹುಲ್ ಶತಕ
ಕೆ.ಎಲ್ ರಾಹುಲ್ ದಾಖಲಿಸಿದ ಭರ್ಜರಿ ಶತಕದ ನೆರವಿನೊಂದಿಗೆ ಆತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನ ಸಮಾಧಾನಕರ ಮೊತ್ತ ದಾಖಲಿಸಿದೆ.

ಕೊಲೊಂಬೋ: ಗಾಲೆ ಟೆಸ್ಟ್ ಎರಡೂ ಇನ್ನಿಂಗ್ಸ್ ನಲ್ಲಿ ದಿವ್ಯ ವೈಫಲ್ಯ ಅನುಭವಿಸಿದ್ದ ಭಾರತ ಕೆ.ಎಲ್ ರಾಹುಲ್ ದಾಖಲಿಸಿದ ಭರ್ಜರಿ ಶತಕದ ನೆರವಿನೊಂದಿಗೆ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಸಮಾಧಾನಕರ ಮೊತ್ತ ದಾಖಲಿಸಿದೆ.
ಕೊಲೊಂಬೋದ ಪಿ.ಸಾರಾ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ಶುರುವಾದ ಪಂದ್ಯದ ದಿನದಾಟ ಮುಕ್ತಾಯವಾದಾಗ ಭಾರತ ತನ ಮೊದಲ ಇನ್ನಿಂಗ್ಸ್ ನಲ್ಲಿ 87 .2 ಓವರ್ ಗಳಲ್ಲಿ 6 ವಿಕೆಟ್ ಗೆ 319 ರಾವ್ ಮಾಡಿ ಸುಸ್ಥಿತಿಯಲ್ಲಿತ್ತು. ಆದಾಗ್ಯೂ ಕೊನೆ ಕ್ಷಣದಲ್ಲಿ ರೋಹಿತ್ ಶರ್ಮಾ ವಿಕೆಟ್ ಪಡೆದ ಶ್ರೀಲಂಕಾ ಪಂದ್ಯದಲ್ಲಿ ಮತ್ತೊಮ್ಮೆ ಹಿಡಿತ ಸಾಧಿಸುವಲ್ಲಿ ಯಶ ಕಂಡಿತು. ಅಂತಿಮವಾಗಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ 19 ರನ್ ಗಳಿಸಿ ಕ್ರಿಸ್ ನಲ್ಲಿದ್ದರು. ಈಗ ಔಟಾಗದೆ ಉಳಿದಿರುವ ವೃದ್ಧಿಮಾನ್ ಸಾಹ ಹಾಗೂ ಕೆಳ ಕ್ರಮಾಂಕದ ಆಟಗಾರರು ಸಿಂಹಳೀಯರ ಸನ್ನಾಹವನ್ನು ಎಷ್ಟರ ಮಟ್ಟಿಗೆ ವಿಫಲಗೊಳಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಫಾರ್ಮ್ ಗೆ ಮರಳಿದ ರಾಹುಲ್: ಗುರುವಾರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗಿಳಿದ ಭಾರತ ಆರಂಭದಲ್ಲೇ ತಡವರಿಸಿತು. ಕೇವಲ 12 ರನ್ ಗಳಿಕೆಗೆ ಆರಂಭಿಕರನ್ನು ಕಳೆದುಕೊಂಡು ತಲ್ಲಣಿಸಿದ ತಂಡಕ್ಕೆ ಅಸರೆಯಾದದ್ದು ಕೆ.ಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೋಹ್ಲಿಯ ಅಮೋಘ ಜತೆಯಾಟ. 5 ನೇ ಓವರ್ ನ ಮೂರನೇ ಎಸೆತದಲ್ಲಿ ಧಮಿಕಾ ಪ್ರಸಾದ್ ಬೌಲಿಂಗ್ ನಲ್ಲಿ ಕರುಣಾರತ್ನೆಗೆ ಕ್ಯಾಚಿತ್ತು ಕ್ರಿಸ್ ತೊರೆದು ತಂಡವನ್ನು ಸಂಕಷ್ಟಕ್ಕೆ ದೂಡಿದರು. ಆದರೆ ಈ ಹಂತದಲ್ಲಿ ಜತೆಯಾದ ರಾಹುಲ್ ಹಾಗೂ ಕೊಹ್ಲಿ ಲಂಕಾ ಬೊಇಲರ್ ಹಾಲನ್ನು ಸುನಾಯಾಸವಾಗಿ ಎದುರಿಸಿ ನಿಧಾನಗತಿಯಲ್ಲಿ ರನ್ ಪೇರಿಸುತ್ತಾ ಸಾಗಿದರು. ಆದರೆ ಡ್ರಿಂಕ್ಸ್ ವಿರಾಮದ ಬಳಿಕ ರಂಗನಾ ಹೆರಾತ್ ಎಸೆತದಲ್ಲಿ ನಾಯಕ ವಿರಾಟ್ ಕೊಹ್ಲಿ ಮ್ಯಾಥ್ಯೂಸ್ ಗೆ ಕ್ಯಾಚಿತ್ತು ಕ್ರಿಸ್ ತೊರೆದರು. ಅಷ್ಟರಲ್ಲಿ 107 ಎಸೆತಗಳಿಂದ 8 ಬೊಉಂಡರಿ ಮತ್ತು 1 ಸಿಕ್ಸರ್ ಕೊಹ್ಲಿ ಬ್ಯಾಟ್ ನಿಂದ ಸಿಡಿದಿತ್ತು.
ಇತ್ತ ಕೋಹ್ಲಿಯ ನಿರ್ಗಮನದ ಬಳಿಕ ಆಡಲಿಳಿದ ರೋಹಿತ್ ಶರ್ಮಾ ಹಿಂದಿನ ವೈಫಲ್ಯವನ್ನು ಮೆಟ್ಟಿನಿಲ್ಲುವಲ್ಲಿ ಸಫಲರಾದರು. ಮೂರನೇ ಕ್ರಮಾಂಕದ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡಿದ ಅವರು, ಯಶ್ವಸಿ ಅರ್ಧಶತಕ ಪೂರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


