ಅಭಿಷೇಕ್ ವರ್ಮಾಗೆ ಚಿನ್ನ
ಏಷ್ಯನ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಅಭಿಷೇಕ್ ವರ್ಮಾ, ಆರ್ಚರಿ ವಿಶ್ವಕಪ್ ಟೂರ್ನಿ (ಮೂರನೇ ಹಂತ)ಯಲ್ಲಿ ಚಿನ್ನದ ಪದಕ...

ವ್ರೊಕ್ಲಾವ್ (ಪೋಲೆಂಡ್): ಏಷ್ಯನ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಅಭಿಷೇಕ್ ವರ್ಮಾ, ಆರ್ಚರಿ ವಿಶ್ವಕಪ್ ಟೂರ್ನಿ (ಮೂರನೇ ಹಂತ)ಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಶನಿವಾರ ನಡೆದ ಪುರುಷರ ಕಾಂಪೌಡ್ ವೈಯಕ್ತಿಕ ವಿಭಾಗದ ಅಂತಿಮ ಸುತ್ತಿನಲ್ಲಿ ಅವರು, ಒಟ್ಟು 148 ಅಂಕಗಳನ್ನು ಪೇರಿಸಿ ಸ್ವರ್ಣ ಸಾಧನೆ ಮಾಡಿದರು. ಅವರಿಗೆ ತೀವ್ರ ಪ್ರತಿಸ್ಪರ್ಧೆ ನೀಡಿದ್ದ ಇರಾನ್ನ ಇಸ್ಮಾಯಿಲ್ ಆಎಬಾದಿ 145 ಅಂಕ ಪೇರಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಭಾರತದ ಇನ್ನಿತರೆ ಕ್ರೀಡಾಳುಗಳಾದ ದೀಪಿಕಾ ಕುಮಾರಿ ಹಾಗೂ ಮಂಗಲ್ ಸಿಂಗ್ ಜೋಡಿ, ಪಂದ್ಯಾವಳಿಯ ರಿಕರ್ವ್ ಮಿಶ್ರ ವಿಭಾಗದಲ್ಲಿ ಫೈನಲ್ ತಲುಪಿದ್ದು, ಭಾನುವಾರ ನಡೆಯುವ ಮುಖಾಮುಖಿಯಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


