ವಿಶ್ವ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ಸೈನಾ, ಸಿಂಧು
ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ...

Published On :
ಜಕಾರ್ತ್(ಇಂಡೋನೇಷ್ಯಾ): ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸಿಂಧು ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವ ಮಾಜಿ ನಂಬರ್‌ಒನ್ ಆಟಗಾರ್ತಿ ಚೀನಾದ ಲೀ ಕ್ಸುರೆಯಿ ಅವರ ಎದುರು ಪ್ರಯಾಸ ಗೆಲುವು ಕಂಡರು. 50 ನಿಮಿಷಗಳ ಹೋರಾಟದಲ್ಲಿ ಸಿಂಧು, 21–17, 14–21, 21–17ರಲ್ಲಿ ಲೀ ಅವರನ್ನು ಮಣಿಸಿದರು. ಟೂರ್ನಿಯಲ್ಲಿ 11ನೇ ಶ್ರೇಯಾಂಕ ಪಡೆದಿರುವ ಸಿಂಧು, ಮುಂದಿನ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಸುಂಗ್ ಜಿ ಹಯುನ್ ಅವರ ಜತೆ ಸೆಣೆಸಲಿದ್ದಾರೆ.
ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ 47 ನಿಮಿಷಗಳ ಕಾಲ ಸೆಣೆಸಾಟದಲ್ಲಿ ಜಪಾನಿನ ಸಯಕ್ ತಕಹಶಿ ಅವರನ್ನು 21–18, 21–14ರಲ್ಲಿ ಮಣಿಸಿದರು. ಸೈನಾ ಅವರು ಮುಂದಿನ ಸುತ್ತಿನಲ್ಲಿ ವಾಂಗ್ ಯಿಹಾನ್ ಹಾಗೂ ಬೇ ಯೆಆನ್ ಜು ಅವರ ನಡುವಣ ಪಂದ್ಯದಲ್ಲಿ ಗೆಲ್ಲವು ಸ್ಪರ್ಧಿಯೊಂದಿಗೆ ಪೈಪೋಟಿ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಿಶ್ವ ಚಾಂಪಿಯನ್ಶಿಪ್World ChampionshipBadmintonಬ್ಯಾಡ್ಮಿಂಟನ್Saina Nehwalಸೈನಾ ನೆಹ್ವಾಲ್PV Sindhuಪಿ.ವಿ.ಸಿಂಧುJakartaಜಕಾರ್ತ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


