ಕ್ರೀಡೆ

ಫುಟ್ಬಾಲ್ : ರೋಮಾ ತಂಡದ ಆಟಗಾರನ ತಲೆಗೆ 'ಕಿಕ್‌' ಕೊಟ್ಟ ಮೆಸ್ಸಿ

ರೋಮಾ ತಂಡದ ಮಪಾವ್ ಯಂಗಾ ಬಿವಾ ಎಂಬ ಆಟಗಾರನೊಂದಿಗೆ ಮೆಸ್ಸಿ ಜಗಳವಾಡಿ ಆತನ ತಲೆಗೆ ತಲೆಯಿಂದ ಗುದ್ದಿದ್ದಾರೆ...

ಫುಟ್ಬಾಲ್ : ರೋಮಾ ತಂಡದ ಆಟಗಾರನ ತಲೆಗೆ 'ಕಿಕ್‌' ಕೊಟ್ಟ ಮೆಸ್ಸಿ
ಲಿಯೋನೆಲ್ ಮೆಸ್ಸಿ- ಮಪಾವ್ ಯಂಗಾ ಬಿವಾ ಜಗಳ
Published On :

ಬಾರ್ಸಿಲೋನಾ: ಇಲ್ಲಿ ಬುಧವಾರ ನಡೆದ ಜಾನ್ ಗಾಂಪರ್ ಟ್ರೋಫಿ ಫ್ರೆಂಡ್ಲೀ ಪಂದ್ಯದಲ್ಲಿ ಬಾರ್ಸಿಲೋನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಎಎಸ್ ರೋಮಾ ತಂಡದ ಆಟಗಾರನ ಜತೆ ಜಗಳವಾಡಿ ಆತನ ತಲೆಗೆ ಕಿಕ್ ಕೊಟ್ಟು ಸುದ್ದಿಯಾಗಿದ್ದಾರೆ.

ರೋಮಾ ತಂಡದ ಮಪಾವ್ ಯಂಗಾ ಬಿವಾ ಎಂಬ ಆಟಗಾರನೊಂದಿಗೆ ಮೆಸ್ಸಿ ಜಗಳವಾಡಿ ಆತನ ತಲೆಗೆ ತಲೆಯಿಂದ ಗುದ್ದಿದ್ದಾರೆ. ಇದಾದ ನಂತರ ಆತ ಕುತ್ತಿಗೆ ಹಿಡಿದು ಬೈಗುಳ ಸುರಿಮಳೆಗೈದಿದ್ದಾರೆ.

ಫಸ್ಟ್ ಹಾಫ್ ನ ವೇಳೆ ರೋಮಾ ಗೋಲ್‌ಪೋಸ್ಟ್ ನತ್ತ ಮೆಸ್ಸಿ ಮುನ್ನಡೆಯುತ್ತಿದ್ದಾಗ ರೆಫ್ರಿ ವಿಶಲ್ ಹೊಡೆದಿದ್ದಾರೆ. ಇದಾದ ನಂತರ ಕುಪಿತಗೊಂಡ ಮೆಸ್ಸಿ ಬಿವಾ ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಮಾತಿನ ನಡುವೆ ಬಿವಾ ತಲೆಗೆ ತಲೆಯಿಂದ ಗುದ್ದಿ ಆತನ ಕುತ್ತಿಗೆ ಹಿಡಿದಾಗ ಸಹ ಆಟಗಾರರು ಬಂದು ಮೆಸ್ಸಿಯನ್ನು ಹಿಡಿದು ದೂರ ತಳ್ಳಿದ್ದಾರೆ.  ಕೂಡಲೇ ರೆಫ್ರಿ ಇಬ್ಬರಿಗೂ ಹಳದಿ ಕಾರ್ಡ್ ತೋರಿಸಿ ಪ್ರಸ್ತುತ ಪರಿಸ್ಥಿತಿಯನ್ನು ತಿಳಿಯಾಗಿಸಿದರು.

ಈ ಪಂದ್ಯದಲ್ಲಿ ಬಾರ್ಸಿಲೋನಾ ರೋಮಾ ತಂಡದ ವಿರುದ್ಧ 3-0 ಅಂತರದಲ್ಲಿ ಗೆಲವು ಸಾಧಿಸಿದೆ. ಜಗಳವಾಡಿದ ನಂತರ ಮೆಸ್ಸಿ ಗೋಲು ಹೊಡೆದು ತಮ್ಮ ಕೋಪ ತಣಿಸಿಕೊಂಡಿದ್ದಾರೆ. ಬಾರ್ಸಿಲೋನಾ ಪರ ನೇಮರ್, ಇವಾನ್ ರಾಕಿಟಿಚ್ಚ ಮತ್ತು ಮೆಸ್ಸಿ ತಲಾ ಒಂದು ಗೋಲು ಗಳಿಸಿದ್ದಾರೆ.

ಸಾಮಾನ್ಯವಾಗಿ ಪಂದ್ಯದ ವೇಳೆ ಸಂಯಮ ಕಾಪಾಡಿಕೊಂಡು ಆಟವಾಡುತ್ತಿದ್ದ ಮೆಸ್ಸಿ ಈ ಪಂದ್ಯದಲ್ಲಿ ಕುಪಿತರಾಗಿದ್ದಕ್ಕೆ ಕಾರಣವೇನೆಂದು ಗೊತ್ತಾಗಿಲ್ಲ. ಈಗ ಮೆಸ್ಸಿ ಮತ್ತು ಬಿವಾ ನಡುವಿನ ಜಗಳದ ವಿಡಿಯೋ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.