ಕ್ರೀಡೆ

ಭಾರತದ ಕ್ಲೀನ್‍ಸ್ವೀಪ್ ಸಾಧನೆ

ಯೂರೋಪ್ ಪ್ರವಾಸದಲ್ಲಿರುವ ಸರ್ದಾರ್ ಪಡೆ ನೇತೃತ್ವದ ಭಾರತೀಯ ಹಾಕಿ ಪಡೆ, ತನ್ನ ಮೊದಲ ಸರಣಿಯಲ್ಲಿ ಅದ್ಭುತ ಯಶಸ್ಸು...

ಭಾರತದ ಕ್ಲೀನ್‍ಸ್ವೀಪ್ ಸಾಧನೆ
ಗುರ್ಜಿಂದರ್ ಸಿಂಗ್
Published On :

ನವದೆಹಲಿ: ಯೂರೋಪ್ ಪ್ರವಾಸದಲ್ಲಿರುವ ಸರ್ದಾರ್ ಪಡೆ ನೇತೃತ್ವದ ಭಾರತೀಯ ಹಾಕಿ ಪಡೆ, ತನ್ನ ಮೊದಲ ಸರಣಿಯಲ್ಲಿ ಅದ್ಭುತ ಯಶಸ್ಸು ದಾಖಲಿಸಿ ಶುಭಾರಂಭ ಮಾಡಿದೆ.

ವ್ಯಾಟಿಂಗ್ಜಿಯೀಸ್‍ನಲ್ಲಿ ಬುಧವಾರ ನಡೆದ ಫ್ರಾನ್ಸ್ ವಿರುದ್ಧ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ, 4-1 ಗೋಲುಗಳ ಅಂತರದಲ್ಲಿ ಗೆಲುವು ಸಂಪಾದಿಸಿತಲ್ಲದೆ, ಎರಡು ಪಂದ್ಯಗಳ ಸರಣಿಯನ್ನು 2-0 ಮೂಲಕ ಕ್ಲೀನ್ ಸ್ವೀಪ್ ಮಾಡಿತು. ಆ. 3ರಂದು ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ, ಇದೇ ಫ್ರಾನ್ಸ್ ವಿರುದ್ಧ 20 ಗೋಲುಗಳ ಜಯ ದಾಖಲಿಸಿತ್ತು.

ಬುಧವಾರ ನಡೆದ ಪಂದ್ಯದಲ್ಲಿ, 14ನೇ ನಿಮಿಷದಲ್ಲಿ ಗುರ್ಜಿಂದರ್ ಸಿಂಗ್, ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮೊದಲ ಗೋಲು ತಂದಿತ್ತರು. ಆದರೆ, 21ನೇ ನಿಮಿಷದಲ್ಲಿ ಫ್ರಾನ್ಸ್‍ನ ಬಾಮ್ಗಾರ್ಟನ್ ಗೋಲು ಗಳಿಸಿ ತಮ್ಮ ತಂಡಕ್ಕೆ 1-1ರ ಸಮಬಲ ಸಾಧಿಸಲು ನೆರವಾದರು.

ಆದರೆ, ಆನಂತರ ಮಹಮ್ಮದ್ ಅಮೀರ್ ಖಾನ್ (30ನೇ ನಿಮಿಷ) ಹಾಗೂ ರೂಪಿಂದರ್ ಪಾಲ್ ಸಿಂಗ್ (52ನೇ ನಿಮಿಷ) ಗಳಿಸಿದ ಗೋಲುಗಳ ಸಹಾಯದಿಂದ ಭಾರತ ಪಂದ್ಯದಲ್ಲಿ 4-1 ಅಂತರದಲ್ಲಿ ಜಯಭೇರಿ ಬಾರಿಸಿತು. ಇದೀಗ ಫ್ರಾನ್ಸ್ ವಿರುದ್ಧ ಜಯಭೇರಿ ಬಾರಿಸಿದ ನಂತರ, ಸರ್ದಾರ್ ಪಡೆ ಸ್ಪೇನ್‍ಗೆ ತೆರಳಲಿದ್ದು, ಅಲ್ಲಿನ ರಾಷ್ಟ್ರೀಯ ತಂಡದ ಜೊತೆಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.