ಬಾಂಗ್ಲಾಗೆ ಸರಣಿ
ಆರಂಭಿಕ ಅನುಭವಿ ಬ್ಯಾಟ್ಸ್‍ಮನ್ ತಮೀಮ್ ಇಕ್ಬಾಲ್‍ರ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಎರಡನೇ ಏಕದಿನ ಕ್ರಿಕೆಟ್...

ಮೀರ್ಪುರ್: ಆರಂಭಿಕ ಅನುಭವಿ ಬ್ಯಾಟ್ಸ್‍ಮನ್ ತಮೀಮ್ ಇಕ್ಬಾಲ್‍ರ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಪಾಕಿಸ್ತಾನ ವಿರುದ್ಧ 7 ವಿಕೆಟ್‍ಗಳ ಜಯ ದಾಖಲಿಸಿದೆ.
ಆ ಮೂಲಕ ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ ಆತಿಥೇಯ ಬಾಂಗ್ಲಾದೇಶ ಆಟಗಾರರು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಮುನ್ನಡೆಯೊಂದಿಗೆ ಗೆದ್ದುಕೊಂಡಿದ್ದಾರೆ. ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 239
ರನ್‍ಗಳಿಸಿತು.
ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ಇನ್ನೂ 11.5 ಓವರುಗಳು ಉಳಿದಿರುವಂತೆಯೇ ಕೇವಲ 3 ವಿಕೆಟ್ ಕಳೆದುಕೊಂಡು 240 ರನ್‍ಗಳಿಸಿ ಗೆಲವು ಸಂಪಾದಿಸಿತು. ತಮೀಮ್ ಇಕ್ಬಾಲ್ 116 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್ ಸೇರಿದಂತೆ ಅಜೇಯ 116 ರನ್‍ಗಳಿಸಿ ಬಾಂಗ್ಲಾದ ಸರಣಿಗೆ ಗೆಲವಿಗೆ ನೆರವಾದರು. ತಮೀಮ್ ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 50 ಓವರುಗಳಲ್ಲಿ 6 ವಿಕೆಟ್‍ಗೆ 239 (ನಸೀಂ ಅಜೇಯ 77, ವಾಹಬ್ ಅಜೇಯ 51, ಹ್ಯಾರಿಸ್ 44, ಅಜರ್ 36, ಶಕೀಬ್ 51ಕ್ಕೆ2).
ಬಾಂಗ್ಲಾದೇಶ 38.1 ಓವರುಗಳಲ್ಲಿ 3 ವಿಕೆಟ್‍ಗೆ 240 (ಇಕ್ಬಾಲ್ ಅಜೇಯ 116, ಮುಷ್ತೀಕರ್ ರಹೀಂ 65, ಅಜ್ಮಲ್ 49ಕ್ಕೆ1).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


