ಕ್ರೀಡೆ

ಧೋನಿ ಹೇಳಿದರೆ 24ನೇ ಮಹಡಿಯಿಂದ ಜಿಗಿಯುವೆ: ಇಶಾಂತ್ ಶರ್ಮಾ

ತಮ್ಮ ಮೆಚ್ಚಿನ ನಾಯಕರ ಬಗ್ಗೆ ಅಪಕ್ವವಾದ ಹೇಳಿಕೆಗಳನ್ನು ನೀಡುವುದು ಭಾರತೀಯ ರಾಜಕಾರಣದಲ್ಲಿ ಮಾಮೂಲು. ಇತ್ತೀಚೆಗೆ, ಚತ್ತೀಸ್‍ಗಡದ ಕಾಂಗ್ರೆಸ್ ನಾಯಕರೊಬ್ಬರು...

ಧೋನಿ ಹೇಳಿದರೆ 24ನೇ ಮಹಡಿಯಿಂದ ಜಿಗಿಯುವೆ: ಇಶಾಂತ್ ಶರ್ಮಾ
ಇಶಾಂತ್ ಶರ್ಮಾ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ
Published On :

ನವದೆಹಲಿ: ತಮ್ಮ ಮೆಚ್ಚಿನ ನಾಯಕರ ಬಗ್ಗೆ ಅಪಕ್ವವಾದ ಹೇಳಿಕೆಗಳನ್ನು ನೀಡುವುದು ಭಾರತೀಯ ರಾಜಕಾರಣದಲ್ಲಿ ಮಾಮೂಲು. ಇತ್ತೀಚೆಗೆ, ಚತ್ತೀಸ್‍ಗಡದ ಕಾಂಗ್ರೆಸ್ ನಾಯಕರೊಬ್ಬರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕಸ ಗುಡಿಸು ಎಂದರೂ ಗುಡಿಸುವೆ ಎಂದಿದ್ದರು. ಆದರೆ, ಇಂಥ ಹೇಳಿಕೆಗಳು ಇದೀಗ ಕ್ರೀಡಾ ವಲಯಕ್ಕೂ ವ್ಯಾಪಿಸಿದೆ.

ಟೀಂ ಇಂಡಿಯಾ ಆಟಗಾರ ಇಶಾಂತ್ ಶರ್ಮಾ ಅವರು ತಂಡದ ನಾಯಕ ಧೋನಿ ಬಗ್ಗೆ ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ. ಧೋನಿಯವರು 24ನೇ ಮಹಡಿಯಿಂದ ಕೆಳಕ್ಕೆ ಹಾರು ಎಂದರೂ ಹಾರುತ್ತೇನೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಆಸೀಸ್ ಪ್ರವಾಸದಲ್ಲಿದ್ದಾಗ ಗಾಯದ ಸಮಸ್ಯೆಗೊಳಗಾಗಿ ಅವರು ತವರಿಗೆ ವಾಪಸ್ಸಾಗಿದ್ದರು. ಇದೇ ಕಾರಣಕ್ಕಾಗಿ ವಿಶ್ವಕಪ್ ನಲ್ಲಿ ಆಡುವ ಅವಕಾಶ ಕಳೆದುಕೊಂಡರು. ಇದರಿಂದ ತೀವ್ರ ಬೇಸರದಲ್ಲಿದ್ದಾಗ ಧೋನಿ ಸಮಾಧಾನಪಡಿಸಿದ್ದನ್ನು ಸ್ಮರಿಸಿದ ಅವರು, ಧೋನಿ ಹೇಳಿದರೆ 24ನೇ ಮಹಡಿಯಿಂದ ಜಿಗಿಯಲು ಸಿದ್ಧ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.