ಐಪಿಎಲ್ ಉದ್ಘಾಟನೆಗೆ ಹೃತಿಕ್ , ಅನುಷ್ಕಾ ಮೆರಗು
ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭ ಮತ್ತಷ್ಟು ಮೆರುಗು ಪಡೆದುಕೊಂಡಿದೆ. ಉದ್ಘಾಟನೆ ನಿಮಿತ್ತವಾಗಿ ನಡೆಯುವ...

ನವದೆಹಲಿ: ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭ ಮತ್ತಷ್ಟು ಮೆರುಗು ಪಡೆದುಕೊಂಡಿದೆ. ಉದ್ಘಾಟನೆ ನಿಮಿತ್ತವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರಾದ ಹೃತಿಕ್ ರೋಷನ್, ಶಾಹಿದ್ ಕಪೂರ್, ಅನುಷ್ಕಾ ಶರ್ಮಾ ಪ್ರತ್ಯೇಕ ನೃತ್ಯ ಪ್ರದರ್ಶನ ನೀಡಲಿದ್ದಾರೆ
ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಶನಿವಾರ ಸುದ್ದಿಗಾರರಿಗೆ ವಿವರಿಸಿದರು.
ಎರಡೂವರೆ ಗಂಟೆಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಏ. 7ರಂದು ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ. ಹಿಂದಿ ಚಿತ್ರರಂಗದ ಫರ್ಹಾನ್ ಅಖ್ತರ್, ಸಂಗೀತ ನಿರ್ದೇಶಕ ಪ್ರೀತಮ್ ಪ್ರತ್ಯೇಕ ಮನರಂಜನಾ ಕಾರ್ಯಕ್ರಮ ನೀಡುವುದು ಪಕ್ಕಾ ಆಗಿದೆ ಎಂದ ಠಾಕೂರ್, ಇಡೀ ಸಮಾರಂಭದ ನಿರೂಪಣೆಯನ್ನು ನಟ ಸೈಫ್ ಅಲಿ ಖಾನ್ ನಡೆಸಿಕೊಡಲಿದ್ದಾರೆ ಎಂದರು.
ಕಳೆದ ಬಾರಿಯ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಕೋಲ್ಕತಾ ನೈಟ್‍ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್, ಟ್ರೋಫಿಯನ್ನು ಪುನಃ ವೇದಿಕೆ ಮೇಲೆ
ತಂದು ಪ್ರತಿಷ್ಠಾಪಿಸುವ ಮೂಲಕ 8ನೇ ಆವೃತ್ತಿಯ ಐಪಿಎಲ್ ಚಾಲನೆಗೊಳ್ಳುತ್ತಿರುವ ಬಗ್ಗೆ ಸಾಂಕೇತಿಕ ಸೂಚನೆ ನೀಡಲಿದ್ದಾರೆ.
ಸಮಾರಂಭದಲ್ಲಿ ವೇದಿಕೆ ಮೇಲೆ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಂಟು ತಂಡಗಳ ನಾಯಕರು ಸಾಲಾಗಿ ನಿಂತು ಪ್ರಮಾಣ ವಚನ
ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮರುದಿನ ಇದೇ ಮೈದಾನದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್
_ ಉದ್ಘಾಟನಾ ಸಮಾರಂಭದಲ್ಲಿ ಹೃತಿಕ್,
ಅನುಷ್ಕಾ, ಶಾಹಿದ್ ನೃತ್ಯ
_ ಏ. 7ರಂದು ಸಂಜೆ 7 ಗಂಟೆಗೆ ಕೋಲ್ಕತಾದ
ಈಡನ್ ಗಾರ್ಡನ್‍ನಲ್ಲಿ ಆರಂಭವಾಗಲಿರುವ
ಕಾರ್ಯಕ್ರಮ
_ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್
ರೈಡರ್ಸ್ ತಂಡದ ನಾಯಕ ಗಂಭೀರ್ ಅವರಿಂದ ಟ್ರೋಫಿ ಪುನರ್ ಪ್ರತಿಷ್ಠಾಪನೆ
_ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಂಟು ತಂಡ ಗಳ ನಾಯಕರಿಂದ ಪ್ರಮಾಣ ವಚನ ಸ್ವೀಕಾರ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುವು
ದರೊಂದಿಗೆ ಪಂದ್ಯಗಳಿಗೆ ಚಾಲನೆ ಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


