ಕ್ರೀಡೆ

ಟೈಮ್ ಕೀಪರ್

ಟೈಮ್ ಕೀಪರ್
Published On :

ಒಂದು ವರ್ಷ, ತಿಂಗಳು, ದಿನ, ನಿಮಿಷಗಳನ್ನು ನಾವು ಹಾಳು ಮಾಡಿಕೊಂಡೆವು ಎಂದು ಗೊಣಗುತ್ತಿರುತ್ತೇವೆ. ತಕ್ಷಣವೇ ಅದನ್ನು ಮರೆತುಬಿಡುತ್ತೇವೆ. ಅಷ್ಟರಲ್ಲಿ ಮತ್ತೆ ವರ್ಷ, ತಿಂಗಳು, ದಿನ ಹಾಗೂ ಅದೆಷ್ಟೋ ನಿಮಿಷಗಳು ಉರುಳಿ ಹೋಗುತ್ತಲೇ ಇರುತ್ತವೆ. ಮತ್ತೆ ಅದೇ ಗೊಣಗಾಟ, ಆದರೆ, ಅದು ಯಾವತ್ತೂ ನಮ್ಮನ್ನು ಪರಿಣಾಮಕಾರಿಯಾಗಿ ಕಾಡುವುದೇ ಇಲ್ಲ. ಬದಲಾವಣೆಯೂ ಆಗುವುದಿಲ್ಲ.
ಆದರೆ, ಅಥ್ಲೀಟ್‌ಗಳ ಜೀವನದಲ್ಲಿ ಪ್ರತಿ ಕ್ಷಣವೂ ಬಹುಮುಖ್ಯವಾಗಿರುತ್ತದೆ. ಓಟಗಾರರು ಸದಾ ತಮ್ಮ ವೇಗವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಕಾರಣ, ಅವರು ಪಾಲ್ಗೊಳ್ಳುವ ಸ್ಪರ್ಧೆಯಲ್ಲಿ ಕೇವಲ ಎದೆ, ಕೈಗಳು ಅಥವಾ ತಲೆ ಈ ಮೂರರಲ್ಲಿ ಯಾವುದೇ ಭಾಗ ಪ್ರತಿಸ್ಪರ್ಧಿಗಿಂತ ಹಿಂದಿದ್ದರೂ, ಸೋಲು ಖಚಿತವಾಗಿರುತ್ತದೆ. ಅದು ಅವರನ್ನು ಜೀವನಪರ್ಯಂತ ಬಾಧಿಸುತ್ತದೆ. ಹೀಗಾಗಿಯೇ, ಅಷ್ಟೊಂದು ತೀವ್ರ ಸ್ಪರ್ಧೆಯನ್ನು ಎದುರಿಸುವ ಮತ್ತು ಗಾಳಿಯಲ್ಲಿ ನುಗ್ಗಿಕೊಂಡು ಹೋಗುವ ಅಥ್ಲೀಟ್‌ಗಳ ಹಿಂಡಿನಲ್ಲಿ ಯಾರು ಮೊದಲು ಎಂದು ಸಮಯ ಕಾಯುತ್ತಾ ಕೂರುವ 'ಟೈಮ್ ಕೀಪರ್‌' ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.
ಈ ಟೈಮ್ ಕೀಪರ್‌ಗಳು ಹೆಚ್ಚಿನ ಏಕಾಗ್ರತೆಯನ್ನು ವಹಿಸಬೇಕಾಗುತ್ತದೆ. ಕಾರಣ 100, 200 ಮೀಟರ್‌ನಂಥ ರೇಸ್‌ಗಳು ಕಲವೇ ಕ್ಷಣಗಳಲ್ಲಿ ಮುಕ್ತಾಯಗೊಳ್ಳುವುದರಿಂದ ಅದರಲ್ಲಿ ಯಾರು ಮೊದಲು ಮತ್ತು ಯಾರು ನಂತರ ಎಂದು ತಕ್ಷಣವೇ ಗುರುತಿಸಬೇಕಾಗುತ್ತದೆ. ಅಲ್ಲದೆ, ಪ್ರಮುಖ ಓಟದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಪ್ರತಿಯೊಬ್ಬ ಅಥ್ಲೀಟ್‌ಗೂ ಮೂವರು ಟೈಮ್ ಕೀಪರ್‌ಗಳು ಇರುತ್ತಾರೆ.
ಮಹತ್ವದ ಅಂಶ
'ಇತ್ತೀಚೆಗೆ ಅತ್ಯಾಧುನಿಕ ತಂತ್ರಜ್ಞಾನ ಬಂದಿರುವ ಹಿನ್ನೆಲೆಯಲ್ಲಿ ಪ್ರಮುಖ ಕ್ರೀಡಾಕೂಟಗಳಲ್ಲಿ ಎಲ್ಲವೂ ದೃಶ್ಯ ಸಮೇತ ದಾಖಲಾಗಿರುತ್ತದೆ. ಹೀಗಾಗಿ ಅಥ್ಲೀಟ್‌ಗಳು ಓಡುತ್ತಿರುವಾಗ ಯಾವುದೇ ಗೊಂದಲ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು. ಆರಂಭ ಮತ್ತು ಅಂತ್ಯದ ಕ್ಷಣ ಕೊಂಚವೂ ವ್ಯತ್ಯಾಸವಾಗದಂತೆ ನಮೂದಿಸುವುದು ತುಂಬಾ ಮುಖ್ಯವಾದದ್ದು' ಎನ್ನುತ್ತಾರೆ 23 ವರ್ಷಗಳಿಂದ 'ಟೈಮ್ ಕೀಪರ್‌' ಆಗಿರುವ ಗೀತಾ ರಂಗನಾಥ್.
ಆಯ್ಕೆ ಹೇಗೆ?
ಅನುಭವಿಗಳನ್ನೇ ಟೈಮ್ ಕೀಪರ್ ಆಗಿ ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಕ್ರೀಡಾಕೂಟಗಳ ಬಗ್ಗೆ ಜ್ಞಾನವಿದ್ದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಅವಕಾಶಗಳು ಲಭ್ಯ. ಸಂಭಾವನೆ ದೊಡ್ಡ ಮೊತ್ತದಲ್ಲಿ ದೊರಕುವುದಿಲ್ಲವಾದರೂ, ಕ್ರೀಡಾಕೂಟದಲ್ಲಿ ದಿನವೊಂದಕ್ಕೆ ಇತ್ತೀಚೆಗೆ ರು. 300ರಿಂದ 400ರ ವರೆಗೆ ದೊರೆಯುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.