ಕತಾರ್‌ನಾಕ್ ಸ್ಟೇಡಿಯಂ!
ಪ್ರತಿಭಟನೆಗಳು ಎಷ್ಟೇ ಕಾವೇರಿದ್ದರೂ ಬ್ರೆಜಿಲ್‌ನಲ್ಲಿ ವಿಶ್ವಕಪ್ ಸುಗಮವಾಗಿ ತೆರೆಕಂಡಿತು. 2018ರ ಪಂದ್ಯಾವಳಿಗೆ...

ಪ್ರತಿಭಟನೆಗಳು ಎಷ್ಟೇ ಕಾವೇರಿದ್ದರೂ ಬ್ರೆಜಿಲ್‌ನಲ್ಲಿ ವಿಶ್ವಕಪ್ ಸುಗಮವಾಗಿ ತೆರೆಕಂಡಿತು. 2018ರ ಪಂದ್ಯಾವಳಿಗೆ ರಷ್ಯಾ ಈಗಾಗಲೇ ಸಜ್ಜಾಗುತ್ತಿದೆ. ಆದರೆ, 2022ರ ಪಂದ್ಯಾವಳಿಯ ಬಿಡ್ ಗೆದ್ದಿರುವ ಕತಾರ್ ಈಗ ಸ್ಟೇಡಿಯಂಗಳನ್ನಲ್ಲ, ವಿವಾದದ ಗೂಡುಗಳನ್ನು ನಿರ್ಮಿಸುತ್ತಿದೆ!
ಕತಾರ್‌ನ ಕ್ರೀಡಾಂಗಣಗಳ ವಿನ್ಯಾಸವೇ ವಿಚಿತ್ರವಾಗಿವೆ. ನಿರ್ಮಾಣವಾಗಲಿರುವ 12 ಕ್ರೀಡಾಂಗಣಗಳ ನೀಲನಕ್ಷೆಯನ್ನು ಕತಾರ್ ಈಗಾಗಲೇ ಬಿಡುಗಡೆಗೊಳಿಸಿದೆ. ಕ್ರೀಡಾಂಗಣ ಕಟ್ಟಡ ಕಾರ್ಯದಲ್ಲಿ ಕೆಲಸಗಾರರ ಸ್ಥಿತಿಗತಿ ಮತ್ತು ಅಲ್ಲಿನ ಸೂಕ್ತ ಹವಾ ನಿಯಂತ್ರಕಗಳನ್ನು ಅಳವಡಿಕೆ ಬಗ್ಗೆಯೂ ಸಮಸ್ಯೆಗಳು ಎದ್ದಿವೆ.
ವಿನ್ಯಾಸಗಳ ವಿವಾದ
ಎರಡು ಸ್ಟೇಡಿಯಂಗಳ ವಿನ್ಯಾಸ ಸದ್ಯ ವಿವಾದ ಸೃಷ್ಟಿಸಿದೆ. 40 ಸಾವಿರ ಅಭಿಮಾನಿಗಳ ಸ್ಥಳಾವಕಾಶ ಹೊಂದಿರುವ ಅಲ್ ವಕ್ರಾಹ ಸ್ಟೇಡಿಯಂನ ಚಿತ್ರ ಮೊದಲನೇ ವಿವಾದ. ಇದು ಕತಾರ್ ಜನರು ಸಾಂಪ್ರದಾಯಿಕವಾಗಿ ಮುತ್ತುಗಳನ್ನು ಹುಡುಕಲು ಸಮುದ್ರದಲ್ಲಿ ಹಾರಲು ಬಳಸುತ್ತಿದ್ದ ಧೋ ಬೋಟ್ ಮಾದರಿಯಲ್ಲಿದೆಯಂತೆ. ಈ ವಿನ್ಯಾಸವನ್ನು ಕೊಂಚ ಬದಲಿಸಬೇಕೆನ್ನುವುದು ಕೆಲವು ಸಂಘಟನೆಗಳ ಆಗ್ರಹ.
ಮಹಿಳಾ ಅಂಗಕ್ಕೆ ಹೋಲಿಕೆ
ಮತ್ತೊಂದು ಸ್ಟೇಡಿಯಂನ ವಿವಾದವಂತೂ ಕೇಳುವುದೇ ಬೇಡ. ಕಾರಣ, ಇದರ ವಿನ್ಯಾಸ ಮಹಿಳೆಯ ಗುಪ್ತಾಂಗವನ್ನು ಹೊಂದುತ್ತದೆ ಎಂದು. ಇದರ ಬದಲಾವಣೆಗೆ ಆಗ್ರಹಿಸಿಯೂ ಧ್ವನಿಗಳು ಎದ್ದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


