ಮೈ ಬೆಚ್ಚಗೆ...
ರಷ್ಯಾದ ಸೋಚಿಯಲ್ಲಿ ಫೆ. 7ರಿಂದ ಆರಂಭಗೊಂಡಿರುವ ವಿಂಟರ್ ಒಲಿಂಪಿಕ್ಸ್ ಈಗ ಕ್ರೀಡೆಗಳಿಗೂ ಹೊರತಾಗಿ ಬೇರೆಯ ರೀತಿಯಲ್ಲೇ ...

ರಷ್ಯಾದ ಸೋಚಿಯಲ್ಲಿ ಫೆ. 7ರಿಂದ ಆರಂಭಗೊಂಡಿರುವ ವಿಂಟರ್ ಒಲಿಂಪಿಕ್ಸ್ ಈಗ ಕ್ರೀಡೆಗಳಿಗೂ ಹೊರತಾಗಿ ಬೇರೆಯ ರೀತಿಯಲ್ಲೇ ಸುದ್ದಿ ಮಾಡುತ್ತಿದೆ. ಖ್ಯಾತ ಕ್ರೀಡಾಳುಗಳು ಪ್ರಸಿದ್ಧ ಬ್ರಾಂಡ್ಗಳಿಗೆ ರಾಯಭಾರಿಗಳಾಗಿರುತ್ತಾರೆ ಅನ್ನೋದು ನಮಗೆಲ್ಲಾ ಗೊತ್ತು ತಾನೆ? ಒಲಿಂಪಿಕ್ಸ್ನಂಥ ದೊಡ್ಡಮಟ್ಟದ ಪಂದ್ಯಾವಳಿಗಳು ನಡೆಯುವ ಸ್ಥಳದಲ್ಲಿ, ಈ ಕ್ರೀಡಾಳುಗಳುಳ್ಳ ಬ್ರಾಂಡ್ ಜಾಹೀರಾತುಗಳ ದೊಡ್ಡ ದೊಡ್ಡ ಪೋಸ್ಟರ್ಗಳು ರಾರಾಜಿಸುತ್ತಿರುತ್ತವೆ. ಅದು ಮೂಮೂಲಿ ವಿಷಯ ಬಿಡಿ. ಆದರೆ, ಇಲ್ಲೊಂದು ಗಿಮಿಕ್ ಇದೆ. ಸೋಚಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿರುವ ಹಲವಾರು ಮಹಿಳಾ ಕ್ರೀಡಾಳುಗಳ ಅರೆನಗ್ನ ಪೋಸ್ಟರ್ಗಳನ್ನು ಮಾಡಿಸಿ, ಕೆಲ ಕಂಪನಿಗಳು ಸೋಚಿಯಲ್ಲಿ ಎಲ್ಲೆಂದರಲ್ಲಿ ಹಾಕಿವೆ. ಹಾಗಂತ ಇದೇನೂ ವಿವಾದಕ್ಕೆ ಕಾರಣವಾಗಿಲ್ಲ. ಕ್ರೀಡೆಗೆ ಗ್ಲಾಮರ್ ತರುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಹಲವಾರು ಕಂಪನಿಗಳು ತಮ್ಮ ನಡೆಯನ್ನು ಸಮರ್ಥಿಸಿವೆ. ಆದರೆ, ಅದೆಲ್ಲಕ್ಕೂ ಮಿಗಿಲಾಗಿ ಇಲ್ಲಿನ ಪೋಸ್ಟರ್ಗಳು ಇಡೀ ರಷ್ಯಾದಲ್ಲೇ ಒಂದು ರೀತಿಯ ಸಂಚಲನ ಮೂಡಿಸಿರುವುದಂತೂ ದಿಟ.
ರಷ್ಯಾದ ಚಳಿಗಾಲ ಅಂದ್ರೆ ಅದು ಅಲ್ಲಿನ ಜನರಿಗೆ ವಿಶೇಷ. ಎಲ್ಲೆಲ್ಲೂ ಹಿಮ. ಚುಮು ಚುಮು ಚಳಿಯಲ್ಲಿ ದಪ್ಪದಪ್ಪನೆಯ ಸ್ವೆಟರ್ ಹಾಕಿಕೊಂಡು ಕೈಯಲ್ಲಿ ಶಾಂಪೇನ್ ಮುಂತಾದ ಬಿಸಿಯಾಗಿಸುವ ಪೇಯಗಳನ್ನು ಹೀರುತ್ತಾ, ಆಗಾಗ ಸಿಗಾರ್ ಸೇದುತ್ತಾ, ಮಜವಾಗಿರೋ ಇಲ್ಲಿಯ ಜನ ಹೊರಗಿನ ಚಳಿಗೆ ದೇಹವನ್ನು ಬಿಸಿಯಾಗಿಟ್ಟುಕೊಳ್ಳಲು ಮಾಡುವ ಇಂಥ ಪ್ರಯತ್ನಗಳು ಹಲವಾರು. ಈಗ, ಪ್ರಸಿದ್ಧ ಬ್ರಾಂಡ್ ಕಂಪನಿಗಳೂ ಜನರ ದೇಹವನ್ನು ಬೆಚ್ಚಗಾಗಿಸಲು ತಮ್ಮ ದೇಣಿಗೆ ನೀಡಲು ಮುಂದಾಗಿವೆ. ಒಬ್ಬರನ್ನು ಬೆಚ್ಚಗಾಗಿಸಲು ಕ್ರೀಡಾಳುಗಳನ್ನು ಅರೆನಗ್ನವಾಗಿಸಿರುವ ಈ ಕಂಪನಿಗಳು, ನಗರದಲ್ಲೆಡೆ ದೊಡ್ಡ ಪೋಸ್ಟರ್ಗಳನ್ನು ಹಾಕಿವೆ.
ಸ್ಪೀಡ್ ಸ್ಕೇಟಿಂಗ್, ಕರ್ಲಿಂಗ್, ಐಸ್ ಹಾಕಿ, ಸ್ಕೈ ಜಂಪಿಂಗ್ ಮುಂತಾದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಕ್ರೀಡಾಳುಗಳನ್ನು ಮಾಡಲ್ಗಳನ್ನಾಗಿ ಬಳಸಿಕೊಳ್ಳಲಾಗಿದೆ. ಇವರಲ್ಲಿ, ಟ್ಯಾನೇಷಿಯಾ ಬೊರೋಡಾಲಿನಾ (ಐಸ್ ಸ್ಕೇಟಿಂಗ್), ಎಕಟೆರಿನಾ ಸ್ಟೋಲ್ಯಾರೊವಾ (ಫ್ರೀ ಸ್ಟೈಲ್ಲ್ಸ್ಕೈಯರ್), ಎಕಟೆರಿನಾ ಗಾಲ್ಕಿನಾ (ಕರ್ಲಿಂಗ್), ಅಲೆಕ್ಸಾಂಡ್ರಾ ಸಾಯ್ಟೋವಾ (ಕರ್ಲಿಂಗ್), ಎಕಟೆರಿನಾ ಬೊಬ್ರೊವಾ (ಫಿಗರ್ ಸ್ಕೇಟಿಂಗ್), ಆನಾ ಪ್ರುಗೋವಾ (ಐಸ್ ಹಾಕಿ), ಸ್ವೇಟ್ಲಾನಾ ಕಾಲ್ಮಿಕೋವಾ (ಐಸ್ ಹಾಕಿ), ಇರಿನಾ ಅವ್ವಾಕುಮೊವಾ (ಸ್ಕೈ ಜಂಪಿಂಗ್), ಓಲ್ಗಾ ಝಾಬ್ಲಿಕೋವಾ (ಕರ್ಲಿಂಗ್), ಮಾರಿಯಾ ಕೊಮಿಸರೊವಾ (ಸ್ಕೈ ಜಂಪಿಂಗ್) ಪ್ರಮುಖರು.
ಅಂದ ಹಾಗೆ, ಮೇಲೆ ಹೇಳಿರುವ ಕ್ರೀಡಾ ಪ್ರಕಾರಗಳು ನಮ್ಮ ದೇಶದಲ್ಲಿ ಅಷ್ಟು ಪ್ರಚಲಿತದಲ್ಲಿಲ್ಲ. ಹಾಗಾಗಿ, ಈ ಕ್ರೀಡಾಪಟುಗಳೂ ಭಾರತೀಯರಿಗೆ ಚಿರಪರಿಚಿತರಲ್ಲ. ಮೇಲಿನ ಪಟ್ಟಿ ಓದಿದ ಬಳಿಕ, ಕ್ರೀಡಾಕೂಟದಲ್ಲಿ ನಮ್ಮ ದೇಶದ ಲೇಡಿ ಕ್ರೀಡಾಳುಗಳಿದಿದ್ದರೆ... ಅಂತ ಕೆಲವರಿಗೆ ಅನ್ನಿಸಿರಬಹುದು. ನೋ ಛಾನ್ಸ್. ಹಾಗಂತ ನಿರಾಶರಾಗಬೇಕಾಗೇನೂ ಇಲ್ಲ. ಒಮ್ಮೆ ಕ್ರೀಡಾಳುಗಳ ಪೋಸ್ಟರ್ಗಳತ್ತ ಕಣ್ಣಾಡಿಸಿ ಸಾಕು. ನಿಮ್ಮ ಕಣ್ಣು, ಮನಸ್ಸು ಸ್ವಲ್ಪ ರಿಲ್ಯಾಕ್ಸ್ ಆಗಬಹುದು.
-ಚೇತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


