ಗಂಡಾಂತರ ತಪ್ಪಿಸಿಕೊಂಡ ಯುವಿ
ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಕೂದಲೆಳೆಯ ಅಂತರದಲ್ಲಿ...

ರಾಜ್‌ಕೋಟ್: ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೌರಾಷ್ಟ್ರ ಹಾಗೂ ಪಂಜಾಬ್ ನಡುವಿನ ರಣಜಿ ಪಂದ್ಯದ ಸೋಮವಾರದ ದಿನದಾಟದಲ್ಲಿ ಆಡುವಾಗ ಚೆಂಡಿನ ಹೊಡೆತಕ್ಕೆ ಅವರು ತುತ್ತಾದರೂ, ಅವರು ಧರಿಸಿದ್ದ ಹೆಲ್ಮೆಟ್ ಅವರನ್ನು ಕಾಪಾಡಿತು.
ಪಂಜಾಬ್ ಇನಿಂಗ್ಸ್‌ನ 72ನೇ ಓವರ್‌ನಲ್ಲಿ ಬೌಲರ್ ವಿಶಾಲ್ ಜೋಷಿ ಅವರ ಎಸೆತವೊಂದು ಯುವರಾಜ್ ಸಿಂಗ್ ಕಣ್ತಪ್ಪಿಸಿ ಸೀದಾ ಬಂದು ಮುಖಕ್ಕೆ ಅಪ್ಪಳಿಸಿತು. ಚೆಂಡು ಅಪ್ಪಳಿಸಿದ ರಭಸಕ್ಕೆ ಯುವರಾಜ್ ಸಿಂಗ್ ನೆಲಕ್ಕುರುಳಿದರು.
ಅರೆಕ್ಷಣದಲ್ಲಿ ಸಂಭವಿಸಿದ ಈ ಘಟನೆಯಿಂದಾಗಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರೂ ಸೇರಿದಂತೆ ಎಲ್ಲರೂ ದಿಗ್ಭ್ರಾಂತರಾದರು. ಯುವಿ ನೆಲಕ್ಕುರುಳಿದ ತಕ್ಷಣವೇ ಫೀಲ್ಡಿಂಗ್‌ನಲ್ಲಿದ್ದ ಎಲ್ಲಾ ಆಟಗಾರರೂ ಓಡಿ ಬಂದು ಯುವಿಯನ್ನು ಸುತ್ತುವರಿದರು. ಆದರೆ, ಎಲ್ಲರೂ ಎಣಿಸಿದಂತೆ ಅಪಾಯವೇನೂ ಸಂಭವಿಸಿರಲಿಲ್ಲ. ವೇಗವಾಗಿ ಧಾವಿಸಿ ಬಂದಿದ್ದ ಚೆಂಡು, ಯುವಿ ತೊಟ್ಟಿದ್ದ ಹೆಲ್ಮೆಟ್‌ನ ಮುಂಭಾಗದಲ್ಲಿದ್ದ ಗ್ರಿಲ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ, ಚೆಂಡು ಮುಖಕ್ಕೆ ಅಪ್ಪಳಿಸಿಕೊಂಡಿರಲಿಲ್ಲ. ಇದರಿಂದ ಆಗಬಹುದಾಗಿದ್ದ ಅಪಾಯದಿಂದ ಅವರು ಪಾರಾಗಿದ್ದರು. ಆಟಗಾರರು ತಮ್ಮನ್ನು ಸುತ್ತುವರಿಯುವ ಮುನ್ನವೇ ಎದ್ದುನಿಂತ ಯುವಿ, ಗ್ರಿಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಚೆಂಡನ್ನು ಕಿತ್ತು ಹೊರತೆಗೆದರು. ಅಲ್ಲಿಗೆ ಎಲ್ಲರೂ ನಿಟ್ಟುಸಿರೂ ಬಿಡುವಂತಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


