ವಿಶ್ವ ಸೂಪರ್ ಸೀರಿಸ್: ಭಾರತ ಹೋರಾಟ ಅಂತ್ಯ
ಚೈನೀಸ್ ತೈಪೇನ ತೈ ತುಂಗ್ಸ್ ವಿರುದ್ಧ 21-11, 13-21, 9-21 ಅಂತರದ ಸೋಲನುಭವಿಸಿದರು...

ದುಬೈ: ಭಾರತದ ಸೈನಾ ನೆಹ್ವಾಲ್ ಬಿಡಬ್ಲೂಎಫ್ ವಿಶ್ವ ಸೂಪರ್ ಸೀರಿಸ್ ಫೈನಲ್ಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ, ಭಾರತಕ್ಕೆ ಪದಕದ ಆಶಾಕಿರಣವೊಂದು ಹೊರಬಿದ್ದಿದ್ದಾರೆ.
ಈ ಮೂಲಕ, ಭಾರತಕ್ಕೆ ಪದಕದ ಆಶಾಕಿರಣವೊಂದು ಕಮರಿ ಹೋಗಿದೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ಅವರು ಚೈನೀಸ್ ತೈಪೇನ ತೈ ತುಂಗ್ಸ್ ವಿರುದ್ಧ 21-11, 13-21, 9-21 ಅಂತರದ ಸೋಲನುಭವಿಸಿದರು.
ಶನಿವಾರ ಇಲ್ಲಿನ ಹಮ್ದನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯ ತೀವ್ರ ಹಣಾಹಣಿಯಿಂದ ಕೂಡಿತ್ತು. ಮೊದಲ ಗೇಮ್‌ನಲ್ಲಿ ತೀವ್ರ ಪೈಪೋಟಿ ನೀಡಿದ ಸೈನಾ, ವೇಗವಾಗಿ ಅಂಕಗಳನ್ನು ಪೇರಿಸುತ್ತಾ ಸಾಗಿದರು.
ಪಂದ್ಯ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ 8-2 ಅಂತರದ ಮುನ್ನಡೆ ಪಡೆದುಕೊಂಡ ಅವರು, ಬ್ರೇಕ್‌ನ ವೇಳೆಗೆ 11-5ರಷ್ಟು ಮುನ್ನಡೆ ಸಾಧಿಸಿದ್ದರು. ನಂತರ, ತಮ್ಮ ಎಂದಿನ ಸ್ಟೈಲಿಶ್ ಆಟ ಆರಂಭಿಸಿದ ಅವರು, ಉತ್ತಮ ಸ್ಮಾಶ್ ಹೊಡೆತಗಳಿಂದ ಐದು ನೇರ ಅಂಕಗಳನ್ನು ಪೇರಿಸಿದ ಅವರು, ಇದೇ ವೇಗದಲ್ಲಿ ಅಂಕಗಳನ್ನು ಪೇರಿಸುತ್ತಾ ಸಾಗಿ ಮೊದಲ ಗೇಮ್ಸ್‌ನಲ್ಲಿ 21-11ರ ಗೆಲುವು ಪಡೆದರು.
ನಂತರ ಪಂದ್ಯದಲ್ಲಿ ಫಿನಿಕ್ಸ್‌ನಂತೆ ಹೋರಾಟ ನಡೆಸಿದ ತ್ಸುಂಗ್ ಅಂತಿಮ ಎರಡು ಗೇಮ್‌ನ್ನು ಕ್ರಮವಾಗಿ 21-13, 21-9 ಅಂಕಗಳಿಂದ ತಮ್ಮದಾಗಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


