ಕ್ರಿಕೆಟಿಗರು ಪತ್ನಿಯನ್ನು ಕರೆದುಕೊಂಡು ಬರಲಿ, ಗರ್ಲ್‌ಫ್ರೆಂಡ್ ಬೇಡ: ಬಿಸಿಸಿಐ
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟಿಗರು ಆಸ್ಟ್ರೇಲಿಯಾದಲ್ಲಿ ತಮ್ಮ ಪತ್ನಿಯೊಂದಿಗೆ ಇರಬಹುದು...

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟಿಗರು ಆಸ್ಟ್ರೇಲಿಯಾದಲ್ಲಿ ತಮ್ಮ ಪತ್ನಿಯೊಂದಿಗೆ ಇರಬಹುದು ಎಂದು ಬಿಸಿಸಿಐ ಹೇಳಿದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸತತ ಎರಡನೇ ಬಾರಿ ಟೀಂ ಇಂಡಿಯಾ ಸೋಲು ಅನುಭವಿಸಿದ್ದು, ಇತರ ದೇಶಗಳಿಗೆ ಪ್ರವಾಸ ಕೈಗೊಳ್ಳುವಾಗ ಕ್ರಿಕೆಟಿಗರು ತಮ್ಮ ಪತ್ನಿಯನ್ನು ಜತೆಯಲ್ಲಿ ಕರೆದೊಯ್ದರೆ ಅದರಲ್ಲಿ ತಪ್ಪೇನಿಲ್ಲ ಎಂದು ಬಿಸಿಸಿಐ ಹೇಳಿದೆ.
ಈ ಹಿಂದೆ ವಿದೇಶಿ ಪ್ರವಾಸದಲ್ಲಿರುವಾಗ ಕ್ರಿಕೆಟಿಗರು ಅವರ ಗರ್ಲ್‌ಫ್ರೆಂಡ್‌ನ್ನು ಜತೆಗೆ ಕರೆದೊಯ್ಯುವುದನ್ನು ನಿಷೇಧಿಸಿತ್ತು. ಮಾತ್ರವಲ್ಲದೆ ಜತೆಗೆ ಪತ್ನಿಯರು ತಂಗುವಂತಿಲ್ಲ ಎಂದು ಹೇಳಿತ್ತು.
ಆದರೆ ಬ್ರಿಸ್ಬೇನ್ ಟೆಸ್ಟ್ ನಲ್ಲಿ ಭಾರತ ಸೋಲನುಭವಿಸಿದ ನಂತರ ಬಿಸಿಸಿಐ ಮದುವೆಯಾದ ಕ್ರಿಕೆಟಿಗರು ಮಾತ್ರ ತಮ್ಮ ಪತ್ನಿಯನ್ನು ಜತೆಗೆ ಕರೆದೊಯ್ಯಬಹುದು ಎಂದು ಹೇಳಿದೆ.
ಅದೇ ವೇಳೆ ಯಾವುದೇ ಕಾರಣಕ್ಕೂ ಕ್ರಿಕೆಟಿಗರು ತಮ್ಮ ಪ್ರೇಯಸಿಯರನ್ನು ಜತೆಗೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ಬಿಸಿಸಿಐ ಖಡಾಖಂಡಿತವಾಗಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


