ಕ್ರೀಡೆ

ಗಬ್ಬಾ ಟೆಸ್ಟ್ ಮಧ್ಯೆ ಇಶಾಂತ್ ಶರ್ಮಾ ಸಿಟ್ಟಾಗಿ ಹೊರ ನಡೆದದ್ದೇಕೆ?

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯನ್ನರ ಆತಿಥ್ಯದ ಬಗ್ಗೆ ತೃಪ್ತರಾಗಿಲ್ಲ...

ಗಬ್ಬಾ ಟೆಸ್ಟ್ ಮಧ್ಯೆ ಇಶಾಂತ್ ಶರ್ಮಾ ಸಿಟ್ಟಾಗಿ ಹೊರ ನಡೆದದ್ದೇಕೆ?
ಇಶಾಂತ್ ಶರ್ಮಾ
Published On :

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯನ್ನರ ಆತಿಥ್ಯದ ಬಗ್ಗೆ ತೃಪ್ತರಾಗಿಲ್ಲ. ಟೀಂ ಇಂಡಿಯಾ ಬ್ರಿಸ್ಬೇನ್‌ಗೆ ತಲುಪಿದ ದಿನದಿಂದ ಇಂದಿನ ವರೆಗೆ ಭಾರತೀಯ ಕ್ರಿಕೆಟಿಗರಿಗೆ ಅಲ್ಲಿ ಸರಿಯಾದ ಊಟ ಸಿಕ್ಕಿಲ್ಲವಂತೆ.

ಎರಡು ಪ್ರಾಕ್ಟೀಸ್ ಮ್ಯಾಚ್‌ಗಳ ಸಮಯದಲ್ಲಿ ಗ್ಲೆನೆಗ್ಲ್ ಓವಲ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ನೀಡಿದ ಆಹಾರದ ಬಗ್ಗೆ ಕ್ರಿಕೆಟಿಗರು ಅಸಮಧಾನ ವ್ಯಕ್ತಪಡಿಸಿ, ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಆದರೆ ಆ ವೇಳೆ ಹ್ಯೂಸ್ ನಿಧನದಿಂದಾಗಿ ವಿಷಾದ ಛಾಯೆ ಎಲ್ಲೆಡೆ ಇರುವುದರಿಂದ ಟೀಂ ಇಂಡಿಯಾ ಈ ಬಗ್ಗೆ ಹೆಚ್ಚು ಒತ್ತು ನೀಡಲು ಹೋಗಲಿಲ್ಲ.

ಮೊದಲ ಟೆಸ್ಟ್ ವೇಳೆ ಅಡಿಲೇಡ್‌ನಲ್ಲಿ ಟೀಂ ಇಂಡಿಯಾಗೆ ಉತ್ತಮವಾದ ಆತಿಥ್ಯವನ್ನೇ ನೀಡಲಾಗಿತ್ತಂತೆ. ದಕ್ಷಿಣ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಭಾರತೀಯರಿಗಾಗಿಗೇ ಭಾರತೀಯ ಶೆಫ್‌ಗಳನ್ನು ನೇಮಿಸಿ, ಒಳ್ಳೆಯ ಆಹಾರವನ್ನು ಉಣ ಬಡಿಸಿತ್ತು.

ಆದರೆ ಬ್ರೆಸ್ಬೇನ್‌ನಲ್ಲಿ ಈ ರೀತಿಯ ಆತಿಥ್ಯ ಸಿಕ್ಕಿಲ್ಲ. ಮೆನುನಲ್ಲಿ ಸಸ್ಯಾಹಾರ ಇಲ್ಲದೇ ಇರುವುದು ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಇಶಾಂತ್ ಶರ್ಮಾ ಮತ್ತು ಸುರೇಶ್ ರೈನಾ ಮೆನುವಿನಲ್ಲಿ ಸಸ್ಯಾಹಾರ ಇಲ್ಲದೇ ಇರುವುದರ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದ್ದರೂ ಪ್ರಯೋಜನವಾಗಲಿಲ್ಲ. ಹೀಗಿರುವಾಗ ಇಶಾಂತ್ ಮತ್ತು ಸುರೇಶ್ ರೈನಾ ಹೊರಗಿನಿಂದ ಆಹಾರ ತಂದು ಸೇವಿಸಿದ್ದರು. ಆದರೆ ಸ್ಟೇಡಿಯಂ ಒಳಗಡೆ ಹೊರಗಿನ ಆಹಾರ ಅಥವಾ ಪಾನೀಯ ತರುವುದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ತಡೆಯೊಡ್ಡಿತ್ತು.

ಈ ಕಾರಣದಿಂದ ಇಶಾಂತ್ ಶರ್ಮಾ ಮತ್ತು ರೈನಾ ಹೊರಗೆ ಹೋಗಿ ಊಟ ಮಾಡಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೂರನೇ ದಿನದ ಮ್ಯಾಚ್‌ನಲ್ಲಿ ರೈನಾ ಆಟವಾಡಿಲ್ಲ. ಆದರೆ ಇಶಾಂತ್ ಶರ್ಮಾ ಪಂದ್ಯದ ನಡುವೆ ಭೋಜನ ವಿರಾಮ ನೀಡಿದಾಗ ಟೀಂ ಜತೆ ಊಟಕ್ಕೆ ಕುಳಿತುಕೊಳ್ಳದೆ ಹೊರಗೆ ಊಟ ಮಾಡಲು ಹೋಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳು ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳಲ್ಲಿ ಕೇಳಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.