ಕ್ರೀಡೆ

ಬೇಲ್ ವೇಗಕ್ಕೆ ಬೋಲ್ಟ್ ಬೌಲ್ಡ್

ವಿಶ್ವದಲ್ಲೇ ವೇಗವಾಗಿ ಓಡುವ ಮನುಷ್ಯ ಉಸೇನ್ ಬೋಲ್ಟ್, ಈ ಬಾರಿ ಇಂಗ್ಲೆಂಡ್ ...

ಬೇಲ್ ವೇಗಕ್ಕೆ ಬೋಲ್ಟ್ ಬೌಲ್ಡ್
Published On :

ವಿಶ್ವದಲ್ಲೇ ವೇಗವಾಗಿ ಓಡುವ ಮನುಷ್ಯ ಉಸೇನ್ ಬೋಲ್ಟ್, ಈ ಬಾರಿ ಇಂಗ್ಲೆಂಡ್ ಪ್ರೀಮಿಯರ್ ಫುಟ್ಬಾಲ್ ಲೀಗ್‌ನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಗೆರಾತ್ ಬೇಲ್‌ಗೆ ಬೌಲ್ಡ್ ಆಗಿದ್ದಾರೆ. ಕಾರಣ, ಆತ ಅತಿ ಹೆಚ್ಚು ಬೆಲೆಗೆ ಮಾರಟವಾಗಿದ್ದಕ್ಕಲ್ಲ. ಇತ್ತೀಚೆಗೆ ಬಾರ್ಸಿಲೋನಾ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಅಚ್ಚರಿಯ ಗೋಲು ದಾಖಲಿಸುವ ಮೂಲಕ ರಿಯಲ್ ಮ್ಯಾಡ್ರಿಡ್‌ಗೆ ಜಯ ತಂದುಕೊಟ್ಟಿದ್ದಕ್ಕೆ, ಬೇಲ್ ಕೌಶಲ್ಯಕ್ಕೆ ಬೋಲ್ಟ್ ಸಂರ್ಪೂಣವಾಗಿ ಮನಸೋತಿದ್ದಾರೆ.
ಗೋಲು ದಾಖಲಿಸಿ ರಿಯಲ್ ಮ್ಯಾಡ್ರಿಡ್‌ಗೆ ಜಯ ತಂದಿದ್ದಕ್ಕೆ ಬೇಲ್‌ಗೆ ಬೋಲ್ಟ್ ಮನಸೋತಿಲ್ಲ. ಬದಲಾಗಿ ಆ ಗೋಲು ದಾಖಲಿಸಲು ಬೇಲ್ ಕಾಪಾಡಿಕೊಂಡ 'ವೇಗ' ವಿಶ್ವದ ವೇಗದ ಮನುಷ್ಯನ ಗಮನ ಸೆಳೆದಿದೆ. 'ಫುಟ್ಬಾಲ್ ಆಡುವ ಪ್ರತಿಯೊಬ್ಬ ಅಥ್ಲೀಟ್‌ನ ವೃತ್ತಿ ಜೀವನದಲ್ಲಿ ಕಾಣುವ ಕನಸಿನ ಗೋಲು ಇದಾಗಿದೆ' ಎಂಬ ಉದ್ಗಾರವನ್ನು ಬೋಲ್ಟ್ ವ್ಯಕ್ತಪಡಿಸಿದ್ದಾರೆ.
ಈ ಗೋಲ್‌ನೊಂದಿಗೆ 'ಕೋಪಾ ಡೆಲ್ ರೇ' ಟೂರ್ನಿಯ ಫೈನಲ್‌ನಲ್ಲಿ ಗೆಲ್ಲುವ ಮೂಲಕ ರಿಯಲ್ ಮ್ಯಾಡ್ರಿಡ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಹೀಗಾಗಿ, ಬಾರ್ಸಿಲೋನಾ ವಿರುದ್ಧ ರಿಯಲ್ ಮ್ಯಾಡ್ರಿಡ್ ಪರ ಬೇಲ್ ದಾಖಲಿಸದ ಗೋಲು ವಾರ ತುಂಬಾ ಪತ್ರಿಕೆಗಳಲ್ಲಿ ಸುದ್ದಿಯಾಗಿ ಸಂಚಲನ ಸೃಷ್ಟಿಸಿತ್ತು.
'ಇದೊಂದು ಅದ್ಭುತ ಗೋಲು. ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಗೋಲ್‌ಕೀಪರ್ ಕಾಲಿನ ಬಳಿ ನುಸುಳಿಕೊಂಡು ಗೋಲಾಗಲು ಬೇಲ್ ತಮ್ಮಲ್ಲಿರುವ ಅಚ್ಚರಿಯ ವೇಗದ ಸಾಮರ್ಥ್ಯವನ್ನು ಸೂಕ್ತವಾಗಿ ಬಳಿಸಿಕೊಂಡರು. ಅಲ್ಲದೆ, ಚೆಂಡು ಗೋಲುಪೆಟ್ಟಿಗೆ ಸೇರಲು ಅಷ್ಟೇ ಶಾಂತತೆಯನ್ನೂ ಕಾಪಾಡಿಕೊಂಡರು. ಈ ಗೋಲು ದಾಖಲಿಸಲು, ಈ ಹಿಂದೆ ಅಥ್ಲೀಟ್ ಆಗಿದ್ದ ಬೇಲ್‌ಗೆ ವೇಗವೇ ನೆರವಾಯಿತು. ಅಲ್ಲದೆ, ಸದ್ಯಕ್ಕೆ ವಿಶ್ವದಲ್ಲೇ ಅತಿ ವೇಗದ ಫುಟ್ಬಾಲರ್ ಎಂದರೆ ಅದು ಬೇಲ್‌' ಎಂದು ಬೋಲ್ಟ್ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ, 24 ವರ್ಷದ ಬೇಲ್ ಈ ವರ್ಷ ರಿಯಲ್ ಮ್ಯಾಡ್ರಿಡ್ ಪರ ಒಟ್ಟು 35 ಬಾರಿ ಗೋಲು ದಾಖಲಿಸಲು ಪ್ರಯತ್ನಿಸಿದ್ದು, ಅದರಲ್ಲಿ 20 ಗೋಲು ಮುಟ್ಟಿವೆ. ಅಲ್ಲದೆ, ಅತಿ ಹೆಚ್ಚು ಮೊತ್ತ ಕೊಟ್ಟು ಖರೀದಿಸಿದ ತಂಡಕ್ಕೆ ಸಮಾಧಾನವನ್ನೂ ತಂದುಕೊಟ್ಟಿದ್ದಾರೆ.
'ವೇಲ್ಸ್ ಪರ ನಾನು ಈ ಹಿಂದೆ ಇದೇ ಮಾದರಿಯ ಗೋಲು ದಾಖಲಿಸಿದ್ದೆ. ನಾನು ಗೋಲು ದಾಖಲಿಸಲು ಬೇಕಾದ ತಂತ್ರವನ್ನು ನನ್ನ ಮನಸ್ಸಿನಲ್ಲಿ ಹೆಣೆಯುತ್ತಿದ್ದೆ. ಗೋಲು ದಾಖಲಾಗುವ ಬಗ್ಗೆ ನನಗೆ ಅನುಮಾನವಿತ್ತು. ಆದರೆ, ಆಗ ನನ್ನ ಕಣ್ಣಿಗೆ ಚೆಂಡನ್ನು ಬಿಟ್ಟು ಬೇರೆನೂ ಕಾಣದಂತೆ ಜಾಗೃತಿವಹಿಸಿದೆ. ಅಂತಿಮವಾಗಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದೆ. ಮ್ಯಾಡ್ರಿಡ್‌ಗೆ ಮೊದಲ ಟ್ರೋಫಿ ಗೆದ್ದುಕೊಟ್ಟಿದ್ದಕ್ಕೆ ಖುಷಿ ಆಗುತ್ತಿದೆ' ಎಂದಿದ್ದಾರೆ ಬೇಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.