ಏಷ್ಯನ್ ಜೂನಿಯರ್ ಟೆನಿಸ್: ತನ್ವಿ ಭಟ್ ಕ್ವಾರ್ಟರ್‌ಗೆ
ಬೆಂಗಳೂರು: ಆಕರ್ಷಕ ಪ್ರದರ್ಶನ ಮುಂದುವರಿಸಿದ ಅಗ್ರ ಶ್ರೇಯಾಂಕದ ಆಟಗಾರ್ತಿ ತನ್ವಿ ಭಟ್ ಏಷ್ಯನ್ ಜೂನಿಯರ್ ರ್ಯಾಂಕಿಂಗ್ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಬುಧವಾರ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತನ್ವಿ ಅವರು ಭವ್ಯಾ ರಮಿನೆನಿ ಅವರನ್ನು 6-1, 6-1 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು. ಕರ್ನಾಟಕದ ಇನ್ನೊಬ್ಬ ಆಟಗಾರ್ತಿ ಮಸ್ಕಾನ್ ರಂಜನಿ ಅವರು ವೆಸ್ಟ್ ಬೆಂಗಾಲ್‌ನ ನೀಲಾಂಜನ ಸಾಹಾ ಅವರನ್ನು ಸೋಲಿಸುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಹೆಜ್ಜೆ ಹಾಕಿದರು. ಆದರೆ, ರಾಜ್ಯದ ಇನ್ನೊಬ್ಬ ಆಟಗಾರ್ತಿ ಸೋನಾಶೀ ಭಟ್ನಾಗರ್ ಅವರು ಆಂಧ್ರಪ್ರದೇಶದ ಶೀಖ್ ಹುಮೇರಾ ವಿರುದ್ಧ 6-3, 6-7 (4), 6-3 ಸೆಟ್‌ಗಳಿಂದ ಸೋಲನುಭವಿಸಿದರು. ಇನ್ನು ಶಿವಾನಿ ಮಂಜಣ್ಣಾ ಅವರು ಮಹಾರಾಷ್ಟ್ರದ ಶಿವಾನಿ ಇಂಗ್ಲೆ ವಿರುದ್ಧ ಕೈಚೆಲ್ಲಿದರು.ಇನ್ನು ತಮಿಳುನಾಡಿನ ಮೆಘಾ ಮುತ್ತುಕುಮಾರ್ ಮತ್ತು ಪಶ್ಚಿಮ ಬಂಗಾಳದ ಅರ್ಜು ಚಕ್ರಬಾರ್ತಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಮೆಘಾ ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಆಟಗಾರ್ತಿ ಆಂಧ್ರಪ್ರದೇಶದ ಕೆ. ಸಾಯಿ ಶಿವಾನಿ ಅವರನ್ನು 2-6, 6-4, 7-6 (4) ಸೆಟ್‌ಗಳಿಂದ ಪರಾಭವಗೊಳಿಸಿದರು. ದೀರ್ಘ ಕಾಲ ನಡೆದ ಪಂದ್ಯದಲ್ಲಿ ಇಬ್ಬರೂ ಆಟಗಾರ್ತಿಯರು ತುಂಬಾ ರಕ್ಷಣಾತ್ಮಕ ಪ್ರದರ್ಶನ ತೋರಿದರು. ಆದರೆ, ಅಂತಿಮವಾಗಿ ಮೇಘಾ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಇನ್ನು ಅರ್ಜಾ ಚಕ್ರವರ್ತಿ ಅವರು 8ನೇ ಶ್ರೇಯಾಂಕ ಪಡೆದಿರುವ ಸ್ರವ್ಯಾ ಶಿವಾನಿ ವಿರುದ್ಧ 6-2, 6-2 ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

