ಬಾಂಗ್ಲಾ ವಿರುದ್ಧದ ಸರಣಿಗೆ ಭಾರತ ವನಿತೆಯರ ತಂಡ ಪ್ರಕಟ: ಹರ್ಮನ್‌ಪ್ರೀತ್ ನಾಯಕಿ
ನವದೆಹಲಿ: ಬಾಂಗ್ಲಾದೇಶದ ವಿರುದ್ಧ ಏ.2 ರಿಂದ ತವರಿನಲ್ಲಿ ಭಾರತ ತಂಡ ಟಿ20 ಹಾಗೂ ಏಕದಿನ ಸರಣಿಯನ್ನಾಡಲಿದ್ದು, ಈ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿ ಹರ್ಮನ್‌ಪ್ರೀತ್ ಕೌರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅಖಿಲ ಭಾರತ ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿಯು ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಮಿಥಾಲಿ ರಾಜ್ ಅವರನ್ನು 15 ಆಟಗಾರ್ತಿಯರ ತಂಡದಿಂದ ಕೈಬಿಡಲಾಗಿದ್ದು, ಆರಂಭಿಕ ಆಟಗಾರ್ತಿ ಪೂನಂ ರಾವತ್ ಅವರನ್ನು ತಂಡದ ಉಪ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಇದೇ ಫೆಬ್ರವರಿಯಲ್ಲಿ ತವರಿನಲ್ಲಿ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನದ ಮೂಲಕ ಮೊದಲ ಸುತ್ತಿನಲ್ಲೇ ಪಂದ್ಯಾವಳಿಯಿಂದ ಹೊರಗುಳಿದ ಭಾರತ ವನಿತೆಯರ ತಂಡ, ಈಗ ಮತ್ತೇ ತವರಿನಲ್ಲಿ ಬಾಂಗ್ಲಾದೇಶ ವನಿತೆಯರ ತಂಡದ ವಿರುದ್ಧ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಪೂನಂ ರಾವತ್ (ಉಪ ನಾಯಕಿ), ಎಂ.ಡಿ ತಿರುಶ್ಕಾಮಿನಿ, ಸ್ಮೃತಿ ಮಂಧನ, ಅನಘ ದೇಶಪಾಂಡೆ, ಸ್ನೇಹ ದೀಪ್ತಿ, ಮೊನಾ ಮೆಶ್ರಾಂ, ಎನ್. ನಿರಂಜನಾ, ಅರ್ಚನಾ ದಾಸ್, ಪೂನಂ ಯಾಧವ್, ರೀತು ಧ್ರುವ್, ಸ್ವಾಗತಿಕ ರತ್, ಶುಭಲಕ್ಷ್ಮಿ ಶರ್ಮಾ, ಸುಷ್ಮಾ ವರ್ಮಾ, ಎಕ್ತ್ ಬಿಷ್ಟ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

