ಚಾಂಪಿಯನ್ಸ್ ಟ್ರೋಫಿ ಗೆದ್ದರೆ ರು. 10 ಕೋಟಿ
ನವದೆಹಲಿ: ಮಿನಿ ವಿಶ್ವಕಪ್ ಸಮರಕ್ಕೆ ಇಂಗ್ಲೆಂಡ್‌ನಲ್ಲಿ ವೇದಿಕೆ ಸಜ್ಜುಗೊಳ್ಳುತ್ತಿದೆ. ಬರುವ ಜೂನ್ 6ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ ಭರಪೂರ ಹಣವನ್ನು ಪಡೆಯಲಿದೆ. ಮೊದಲ ಸ್ಥಾನ ಪಡೆಯಲಿರುವ ತಂಡ ರು. 10 ಕೋಟಿ ಸಂಪಾದಿಸಲಿದೆ. 2ನೇ ಸ್ಥಾನ ಬಂದ ತಂಡ ರು. 5 ಕೋಟಿ ಸಂಪಾದಿಸಲಿದೆ.
50 ಓವರ್‌ಗಳ ಪಂದ್ಯಾವಳಿಗೆ ಐಸಿಸಿ ಒಟ್ಟು ರು. 20 ಕೋಟಿ ಬಹುಮಾನ ಮೊತ್ತವನ್ನು ಮೀಸಲಿಟ್ಟಿದೆ. ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಸೋಲುವ ಎರಡೂ ತಂಡಗಳಿಗೆ ತಲಾ ರು. 2 ಕೋಟಿ ಸಂಪಾದಿಸಲಿವೆ. ಇನ್ನು ಎರಡು ಗುಂಪುಗಳಲ್ಲಿ ಮೂರನೇ ಸ್ಥಾನ ಗಳಿಸುವ ತಂಡಗಳು ತಲಾ ರು. 50 ಲಕ್ಷ ಪಡೆಯಲಿವೆ. ಪಂದ್ಯಾವಳಿ ಇಂಗ್ಲೆಂಡ್‌ನ ಕಾರ್ಡಿಫ್, ಎಡ್ಜ್‌ಬಾಸ್ಟನ್ ಹಾಗೂ ಓವಲ್‌ನಲ್ಲಿ ನಡೆಯಲಿದೆ.
ಭಾರತ ತಂಡ ಪಂದ್ಯಾವಳಿಯಲ್ಲಿ ಜೂನ್ 6 ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಜೂನ್ 15ರಂದು ಬರ್ಮಿಂಗ್ ಹ್ಯಾಮ್‌ನಲ್ಲಿ ಪಂದ್ಯ ನಡೆಯಲಿದೆ. ಭಾರತ ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೂ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿಲ್ಲ. ಅಲ್ಲದೆ ಪಾಕಿಸ್ತಾನ ಸಹ ಮಿನಿ ವಿಶ್ವಕಪ್‌ನಲ್ಲಿ ಇದುವರೆಗೂ ಉತ್ತಮ ಪ್ರದರ್ಶನ ತೋರಿಲ್ಲ.
'ವಿಶ್ವದ ಅಗ್ರ 8 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಹೀಗಾಗಿ ಬಲಿಷ್ಠ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ಮೂರು ವಿಶ್ವದರ್ಜೆಯ ಮೈದಾನಗಳಲ್ಲಿ 18 ದಿನಗಳ ಕಾಲ ನಡೆಯಲಿರುವ 15 ಪಂದ್ಯಗಳ ಪಂದ್ಯಾವಳಿಯ ತೀವ್ರತೆ ಹೆಚ್ಚಲಿದೆ. ಅಲ್ಲದೆ ಪ್ರತಿಯೊಂದು ಪಂದ್ಯ ಸಹ ಮಹತ್ವದ್ದಾಗಿರುತ್ತದೆ' ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವ್ ರಿಚರ್ಡ್ ಸನ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
'ಅಗ್ರ ಆಟಗಾರರು ಮತ್ತು ತಂಡಗಳು ಜಾಗತಿಕ ಪಂದ್ಯಾವಳಿಯಲ್ಲಿ ಯಶಸ್ಸು ಸಾಧಿಸಲು ಎದುರು ನೋಡುತ್ತಿದ್ದಾರೆ. ದೊಡ್ಡ ಬಹುಮಾನ ಮೊತ್ತ ಹೊಂದಿರುವ ಪ್ರಮುಖ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಶ್ವದ ಶ್ರೇಷ್ಠ ಆಟಗಾರರ ಪ್ರದರ್ಶನ ವೀಕ್ಷಿಸಲು ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳಿಗೆ ಐಸಿಸಿ ವಿಶೇಷ ಅವಕಾಶವನ್ನು ಒದಗಿಸಿಕೊಟ್ಟಿದೆ ' ಎಂದಿದ್ದಾರೆ.
'ಇಂಗ್ಲೆಂಡ್‌ನಲ್ಲಿ ಎಲ್ಲ ಸಮುದಾಯವರೂ ಇದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಗಳು ಸ್ಥಳೀಯ ಅಭಿಮಾನಿಗಳನ್ನು ಹೊಂದಲಿವೆ. ಇದು ಅಂಗಣದಲ್ಲಿ ಅದ್ಭುತ ವಾತಾವರಣವನ್ನು ಮೂಡಿಸಲಿದೆ' ಎಂದು ಪಂದ್ಯಾವಳಿಯ ನಿರ್ದೇಶಕ ಸ್ಟೀವ್ ಎಲ್ವರ್ತ್ ಹೇಳಿದ್ದಾರೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಅತಿಥೇಯ ಇಂಗ್ಲೆಂಡ್ ಎ ಗುಂಪಿನಲ್ಲಿದ್ದರೆ, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಬಿ ಗುಂಪಿನಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

