ಕ್ರೀಡೆ

ಐಪಿಎಲ್ ವೇಳಾಪಟ್ಟಿ ಬದಲು

ಮೇ ತಿಂಗಳಲ್ಲಿ ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮೇ.4 ಮತ್ತು 6 ರಂದು...

ಐಪಿಎಲ್ ವೇಳಾಪಟ್ಟಿ ಬದಲು
Published On :

ನವದೆಹಲಿ: ಮೇ ತಿಂಗಳಲ್ಲಿ ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮೇ.4 ಮತ್ತು 6 ರಂದು ನಡೆಯಬೇಕಿದ್ದ ಐಪಿಎಲ್ 6ನೇ ಆವೃತ್ತಿ ಪಂದ್ಯಗಳಲ್ಲಿನ ವೇಳಾ ಪಟ್ಟಿಯನ್ನು ಪರಿಷ್ಕರಿಸಲಾಗಿದೆ.
ಮೇ.4 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯವನ್ನು ಮೇ.14ಕ್ಕೆ ಮುಂದೂಡಲಾಗಿದೆ.
ಮೇ.6ರಂದು ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ನಡುವಿನ ಪಂದ್ಯವನ್ನು ಏ.9ರಂದು ನಡೆಸಲು ನಿರ್ಧರಿಸಲಾಗಿದೆ. ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದ್ದು, ಪಂದ್ಯದ ದಿನವನ್ನು ಬದಲಿಸಲಾಗಿದೆ. ಇದರ ಜತೆಗೆ ಇತರೆ ಕೆಲವು ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆಗಳಾಗಿವೆ. ಏ.23 ರಂದು ಮೊಹಾಲಿಯಲ್ಲಿ ನಡೆಯಬೇಕಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ನಡುವಿನ ಪಂದ್ಯ ಧರ್ಮಶಾಲದಲ್ಲಿ ಮೇ.16ರಂದು ನಡೆಯಲಿದೆ. ಜತೆಗೆ ಮೇ 16ರಂದು ನಡೆಯಬೇಕಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಧರ್ಮಶಾಲದಲ್ಲಿ ಮೇ.6 ರಂದು ನಡೆಯಲಿದೆ.

ಬದಲಾದ ಪಂದ್ಯಗಳ ವೇಳಾಪಟ್ಟಿ
 ಏ.23ರಂದು ಮೊಹಾಲಿಯಲ್ಲಿ ಸಂಜೆ 8ಕ್ಕೆ ನಡೆಯಬೇಕಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ನಡುವಿನ ಪಂದ್ಯ ಮೇ.16ರಂದು ರಾತ್ರಿ 8ಕ್ಕೆ ಧರ್ಮಶಾಲದಲ್ಲಿ ನಡೆಯಲಿದೆ.
 ಮೇ.4 ರಂದು ನಡೆಯಲಿರುವ ಸನ್‌ರೈಸರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ನಡುವಿನ ಪಂದ್ಯ ಸಂಜೆ 4 ಗಂಟೆಗೆ ಬದಲಿಗೆ ಸಂಜೆ 8 ಗಂಟೆಗೆ ನಡೆಯಲಿದೆ.
 ಮೇ.4ರಂದು ಬೆಂಗಳೂರಿನಲ್ಲಿ ರಾತ್ರಿ 8ಕ್ಕೆ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯವನ್ನು ಮೇ.14 ಸಂಜೆ 4ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
 ಮೇ.6 ರಂದು ಬೆಂಗಳೂರಿನಲ್ಲಿ ರಾತ್ರಿ 8ಕ್ಕೆ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ನಡುವಿನ ಪಂದ್ಯವನ್ನು ಏ.9ರಂದು ಸಂಜೆ 4ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
 ಮೇ.13ರಂದು ದೆಹಲಿಯಲ್ಲಿ ಸಂಜೆ 4ಕ್ಕೆ ನಡೆಯಬೇಕಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ನಡುವಿನ ಪಂದ್ಯ ಏ.23ಕ್ಕೆ ಸಂಜೆ 8ಕ್ಕೆ ದೆಹಲಿಯಲ್ಲಿ ನಡೆಯಲಿದೆ.
 ಮೇ.14 ರಂದು ರಾಂಚಿಯಲ್ಲಿ ರಾತ್ರಿ 8ಕ್ಕೆ ನಡೆಯಬೇಕಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪುಣೆ ವಾರಿಯರ್ಸ್ ನಡುವಿನ ಪಂದ್ಯ ಮೇ.15 ಸಂಜೆ 4ಕ್ಕೆ ದೆಹಲಿಯಲ್ಲಿ ನಡೆಯಲಿದೆ.
 ಮೇ.16ರಂದು ಧರ್ಮಶಾಲದಲ್ಲಿ ಸಂಜೆ 4ಕ್ಕೆ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯವನ್ನು ಮೇ.6ಕ್ಕೆ ಮೊಹಾಲಿಯಲ್ಲಿ ರಾತ್ರಿ 8ಕ್ಕೆ ನಡೆಯಲಿದೆ.
 ಮೇ.16ರಂದು ಧರ್ಮಶಾಲದಲ್ಲಿ ರಾತ್ರಿ 8ಕ್ಕೆ ನಡೆಯಬೇಕಿದ್ದ ಚೆನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ನಡುವಿನ ಪಂದ್ಯ ಮೇ.14ರಂದು ರಾತ್ರಿ 8ಕ್ಕೆ ಧರ್ಮಶಾಲದಲ್ಲಿ ನಡೆಯಲಿದೆ.
 ಮೇ.19 ರಂದು ಬೆಂಗಳೂರಿನಲ್ಲಿ ಸಂಜೆ 4ಕ್ಕೆ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮೇ.18ರಂದು ರಾತ್ರಿ 8ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
 ಮೇ.18ರಂದು ಪುಣೆಯಲ್ಲಿ ರಾತ್ರಿ 8ಕ್ಕೆ ನಡೆಯಬೇಕಿದ್ದ ಪುಣೆ ವಾರಿಯರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ನಡುವಿನ ಪಂದ್ಯ ಮೇ.19 ಸಂಜೆ 4ಕ್ಕೆ ಪುಣೆಯಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.