ಕ್ರೀಡೆ

ಐ-ಲೀಗ್: ಸದರ್ನ್ ತಂಡಕ್ಕೆ ಜಯ

Published On :

ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಡಿವಿಷನ್ ಐ ಲೀಗ್ ಪಂದ್ಯಾವಳಿಯ ಬುಧವಾರದ ಪಂದ್ಯಗಳಲ್ಲಿ ಸದರ್ನ್ ಸ್ಯಾಮಿಟಿ ತಂಡ ಜಯಗಳಿಸಿದೆ. ಮುಂಬೈ ಟೈಗರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸದರ್ನ್ ಸ್ಯಾಮಿಟಿ ತಂಡ 1-2 ಅಂತರದ ಜಯ ಸಾಧಿಸಿತು.
ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಸದರ್ನ್ ಸ್ಯಾಮಿಟಿ ಮೊದಲ ಗೋಲು ದಾಖಲಿಸಿತು. ಸ್ಯಾಮಿಟಿ ತಂಡದ ಸೋವನ್ ಚಕ್ರವರ್ತಿ ಪಂದ್ಯದ 11ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ, ತಮ್ಮ ತಂಡಕ್ಕೆ ಮೊದಲ ಗೋಲಿನ ಉಡುಗೊರೆ ನೀಡಿದರು. ಇದಾದ ನಂತರ, ಪಂದ್ಯದ 72ನೇ ನಿಮಿಷದಲ್ಲಿ ಟೈಗರ್ಸ್ ತಂಡ ತನ್ನ ಮೊದಲ ಗೋಲು ಗಳಿಸಿತು.  ಮಹಮ್ಮದ್ ರಫಿ ಅವರು ಈ ಗೋಲು ಗಳಿಸಿದರು.
ಇದಾದ ನಂತರ, ಸ್ಯಾವಿಟಿ ತಂಡ ತನ್ನ ಎರಡನೇ ಗೋಲು ದಾಖಲಿಸಿತು.  ಫ್ರಾನ್ಸಿಸ್ ಒನೇಯೇಮಾ 81ನೇ ನಿಮಿಷದಲ್ಲಿ ಗೋಲು ಗಳಿಸಿ, ತಮ್ಮ ತಂಡಕ್ಕೆ 2-1ರ ಮುನ್ನಡೆ ತಂದುಕೊಟ್ಟರು. ಇದಾದ ನಂತರ, ಉಭಯ ತಂಡಗಳಿಗೆ ಯಾವುದೇ ಗೋಲು ದಾಖಲಿಸಲಿಲ್ಲ. ಅಂತಿಮವಾಗಿ, ಸ್ಯಾಮಿಟಿ ತಂಡ, ಮುಂಬೈ ಟೈಗರ್ಸ್ ತಂಡದ ವಿರುದ್ಧ ಇದೇ ಅಂತರದ ಜಯ ಗಳಿಸಿತು.
ಹಿಂದೂಸ್ತಾನ ಪಂದ್ಯ ಡ್ರಾ: ಏತನ್ಮಧ್ಯೆ, ಈಗಲ್ಸ್ ಹಾಗೂ ಹಿಂದೂಸ್ತಾನ್ ತಂಡಗಳ ನಡುವೆ ನಡೆದಿದ್ದ ಐ ಲೀಗ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಉಭಯ ತಂಡಗಳು 2-2 ಗೋಲುಗಳನ್ನು ಗಳಿಸಿದವು.
ಪಂದ್ಯದ 37ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಹಿಂದೂಸ್ತಾನ್ ತನ್ನ ಗೋಲಿನ ಖಾತೆ ತೆರೆಯಿತು. ಆ್ಯಂಡ್ರಿಯಾ ಸಿಲ್ವ ಅವರ ಪ್ರಯತ್ನದಿಂದ ಈ ಗೋಲು ದಾಖಲಾಗಿತ್ತು. ಇದಾದ ನಂತರ, ಪಂದ್ಯದ 64ನೇ ನಿಮಿಷದಲ್ಲಿ ಮಾಹೇನೇರ್ ಸಿಂಗ್ ಅವರು ಮತ್ತೊಂದು ಗೋಲು ದಾಖಲಿಸಿ, ಹಿಂದೂಸ್ತಾನ್ ತಂಡಕ್ಕೆ 2-0ಯ ಮುನ್ನಡೆ ತಂದುಕೊಟ್ಟರು.
ಆದರೆ, ಈಗಲ್ಸ್ ತಂಡ ರಿನೋ ಆಂಟೋ ಅವರು ಪಂದ್ಯದ 85ನೇ ನಿಮಿಷದಲ್ಲಿ ತಮಗೆ ಸಿಕ್ಕಿದ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿ, ಎದುರಾಳಿ ತಂಡದ ವಿರುದ್ಧ ಹೊಂದಿದ್ದ ಅಂತರವನ್ನು 2-1ಕ್ಕೆ ತಗ್ಗಿಸಿದರು.
ಇದಾದ ನಂತರ, 87ನೇ ನಿಮಿಷದಲ್ಲಿ ಸತೀಶ್ ಅವರು, ಮತ್ತೊಂದು ಗೋಲು ದಾಖಲಿಸುವ ಮೂಲಕ, ಎದುರಾಳಿ ತಂಡದ ವಿರುದ್ಧ ಸಮಬಲ ಸಾಧಿಸುವಲ್ಲಿ ನೆರವಾದರು. ಅಂತ್ಯದವರೆಗೂ ಇದೇ ರೀತಿಯ ಸಮಬಲ ಮುಂದುವರಿದಿದ್ದರಿಂದ ಪಂದ್ಯ ಡ್ರಾಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.