ಮ್ಯಾಜಿಷಿಯನ್ಸ್ ವಿರುದ್ಧ ವಾರಿಯರ್ಸ್ ಗೆಲುವು
ಮುಂಬೈ: ಪಂಜಾಬ್ ವಾರಿಯರ್ಸ್ ತಂಡ, ಗುರುವಾರ ನಡೆದ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ಪಂದ್ಯದಲ್ಲಿ ಮುಂಬೈ ವಿರುದ್ಧ ತನ್ನ ಮೂರನೇ ಗೆಲುವು ದಾಖಲಿಸಿತು.
ಇಲ್ಲಿನ ಎಂಎಚ್‌ಎ ಮಹಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್, 3-1 ಅಂತರದಲ್ಲಿ ಮುಂಬೈ ಮ್ಯಾಜಿಷಿಯನ್ಸ್ ತಂಡವನ್ನು ಸೋಲಿಸಿತು. ಈ ಪಂದ್ಯಾವಳಿಯಲ್ಲಿ ಒಟ್ಟು ಮೂರು ಬಾರಿ ಮುಖಾಮುಖಿಯಾದಾಗಲೂ ಪಂಜಾಬ್ ತಂಡವೇ ಜಯ ಗಳಿಸಿದಂತಾಗಿದೆ. ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ, ಪಂಜಾಬ್ ತಂಡ, ಮುಂಬೈ ತಂಡವನ್ನು 4-2 ಗೋಲುಗಳಿಂದ ಸೋಲಿಸಿತ್ತು. ನಂತರ, ಎರಡನೇ ಬಾರಿ ಮುಖಾಮುಖಿಯಾಗಿದ್ದಾಗ, 4-3 ಅಂತರದಲ್ಲಿ ಸೋಲಿಸಿತ್ತು. ಇದೀಗ, ಮೂರನೇ ಬಾರಿಯ ಕದನದಲ್ಲಿ 3-1 ಅಂತರದಿಂದ ಮುಂಬೈ ತಂಡವನ್ನು ಪಂಜಾಬ್ ಸೋಲಿಸಿದೆ.
ಮೊದಲಾರ್ಧದಲ್ಲೇ ವಾರಿಯರ್ಸ್ ತಂಡದ ಪರವಾಗಿ ಎರಡು ಗೋಲುಗಳು ದಾಖಲಾಗಿದ್ದವು. ಧರ್ಮವೀರ್ ಸಿಂಗ್ (ಪಂದ್ಯದ 7ನೇ ನಿಮಿಷ) ಹಾಗೂ ರಾಬರ್ಟ್ ಹ್ಯಾಮೊಂಡ್ (22ನೇ ನಿಮಿಷ) ಪಂಜಾಬ್ ಪರ ಗೋಲು ಗಳಿಸಿದ್ದರು. ನಂತರ, ದ್ವಿತೀಯಾರ್ಧದಲ್ಲಿ ಮಾಲಕ್ ಸಿಂಗ್ (52ನೇ ನಿಮಿಷದಲ್ಲಿ) ಮತ್ತೊಂದು ಗೋಲು ಗಳಿಸಿ, ತಂಡಕ್ಕೆ ಮೂರನೇ ಗೋಲು ತಂದಿತ್ತರು.
ಮುಂಬೈ ಪರವಾಗಿ ದಾಖಲಾದ ಏಕೈಕ ಗೋಲ್ ಅನ್ನು ಆ ತಂಡದ ಜಾನಿ ಜಾಸ್ಟೋರಿಕಾ ಅವರು (47ನೇ ನಿಮಿಷ) ದಾಖಲಿಸಿದರು.
ಮೂರನೇ ಸ್ಥಾನದಲ್ಲಿ ಪಂಜಾಬ್: ಈ ಪಂದ್ಯದ ಜಯದಿಂದಾಗಿ ಪಂಜಾಬ್ ತಂಡ ಪಂದ್ಯಾವಳಿಯಲ್ಲಿ ಇದುವರೆಗಿನ ತನ್ನ ಅಭಿಯಾನದಲ್ಲಿ ಒಟ್ಟು 25 ಅಂಕಗಳನ್ನು ಪಡೆದಂತಾಗಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಪಟ್ಟಿಯ ಮೊದಲ ಸ್ಥಾನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (34 ಅಂಕ) ಇದ್ದು, ರಾಂಚಿ ರೈನೋಸ್ (29 ಅಂಕ) ಎರಡನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

