ಪಾಕಿಸ್ತಾನ ತಂಡಕ್ಕೆ ವಾಸ್ತವ್ಯ: ಬಿಸಿಸಿಐ ಮೇಲೆ ಟೀಕಾ ಪ್ರಹಾರ
ಕರಾಚಿ: ಈ ಬಾರಿಯ ಮಹಿಳಾ ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ಮಹಿಳಾ ತಂಡಕ್ಕೆ ಕಟಕ್‌ನಲ್ಲಿನ ಕ್ರೀಡಾಂಗಣದಲ್ಲೇ ವಾಸ್ತವ್ಯದ ಅನುಕೂಲ ಕಲ್ಪಿಸಿರುವ ಬಿಸಿಸಿಐ ನಿರ್ಧಾರದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟರ್‌ಗಳು ಕಿಡಿ ಕಾರಿದ್ದಾರೆ.
ಭಾರತದಲ್ಲಿ ನಡೆಯುವ ಯಾವುದೇ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ಕ್ರಿಕೆಟರ್‌ಗಳು ಭಾಗವಹಿಸಲು ಅನುಕೂಲ ನೀಡಬಾರದೆಂದು ಆಗ್ರಹಿಸಿ, ಕೆಲ ಸಂಘಟನೆಗಳು ಸತ್ಯಾಗ್ರಹ ಮಾಡುತ್ತಿರುವ ಹಿನ್ನೆಲೆಯಲ್ಲಿ, ಭದ್ರತೆಯ ದೃಷ್ಟಿಯಿಂದ ಪಾಕಿಸ್ತಾನ ತಂಡ ಅಭ್ಯಾಸ ನಡೆಸುತ್ತಿರುವ ಕಟಕ್ ಕ್ರೀಡಾಂಗಣದಲ್ಲೇ ವಾಸ್ತವ್ಯ ಕಲ್ಪಿಸಲಾಗಿದೆ.
ಆದರೆ, ಬಿಸಿಸಿಐನ ಈ ಕ್ರಮವನ್ನು ಉಗ್ರವಾಗಿ ಟೀಕಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರರಾದ ಅಬ್ದುಲ್ ಖಾದಿರ್, ರಶೀದ್ ಲತೀಫ್, 'ಎರಡೂ ದೇಶಗಳ ನಡುವೆ ಪುನಃ ಕ್ರೀಡಾ ಬಾಂಧವ್ಯ ಆರಂಭಿಸಲು ನಾವು ಉತ್ಸುಕರಾಗಿದ್ದೇವೆ. ಆದರೆ, ಭಾರತದಲ್ಲಿನ ರಾಜಕೀಯ ವ್ಯವಸ್ಥೆ ಇದಕ್ಕೆ ಅವಕಾಶ ನೀಡುತ್ತಿಲ್ಲ. ಆದರೂ, ನಮ್ಮ ಕ್ರೀಡಾಳುಗಳನ್ನು ಹೋಟೆಲ್‌ನಲ್ಲಿಡದೇ ಕ್ರೀಡಾಂಗಣದಲ್ಲಿ ಇರಿಸಿರುವುದು ಖಂಡನಾರ್ಹ. ಆಟಗಾರರಿಗೆ ಭದ್ರತೆ ನೀಡುವಲ್ಲಿ ಬಿಸಿಸಿಐಗೇ ನಂಬಿಕೆ ಇಲ್ಲ' ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

