ಕ್ರೀಡೆ

ರೈನೋಸ್‌ಗೆ ಜಯ ತಂದ ಜಾಕ್ಸನ್, ಮನದೀಪ್

Published On :

ರಾಂಚಿ: ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್)ನ ಅಂಕಪಟ್ಟಿಯಲ್ಲಿ ಟಾಪ್ 4ರೊಳಗೆ ಕಾಣಿಸಿಕೊಳ್ಳುವ ಕುರಿತಂತೆ ಮುಂಬೈ ಮ್ಯಾಜಿಷಿಯನ್ಸ್ ಕಾಣುತ್ತಿದ್ದ ಕನಸು ಭಾಗಶಃ ಭಗ್ನಗೊಂಡಿದೆ.
ಸೋಮವಾರ ಇಲ್ಲಿನ ಆಸ್ಟ್ರೋ ಟರ್ಫ್ ಕ್ರೀಡಾಂಗಣದಲ್ಲಿ ನಡೆದ ಎಚ್‌ಐಎಲ್ ಪಂದ್ಯದಲ್ಲಿ ರಾಂಚಿ ರೈನೋಸ್ ತಂಡ ಮುಂಬೈ ಮ್ಯಾಜಿಷಿಯನ್ಸ್ ತಂಡವನ್ನು 2-1 ಅಂತರದಲ್ಲಿ ಪರಾಭವಗೊಳಿಸಿತು.
ಆಶ್ಲೆ ಜಾಕ್ಸನ್ ಹಾಗೂ ಮನದೀಪ್ ಸಿಂಗ್ ಗಳಿಸಿಕೊಟ್ಟ ಎರಡು ಗೋಲುಗಳು ರಾಂಚಿ ತಂಡದ ಗೆಲುವಿಗೆ ಕಾರಣವಾದವು. ಮುಂಬೈ ಮ್ಯಾಜಿಷಿಯನ್ಸ್ ಪರವಾಗಿ ಸಂದೀಪ್ ಸಿಂಗ್ ಒಂದು ಗಳಿಸಿದರು.
ಈ ಪಂದ್ಯದ ಜಯದಿಂದ ಒಟ್ಟು 27 ಅಂಕಗಳನ್ನು ಗಳಿಸಿಕೊಂಡಿರುವ ರಾಂಚಿ ರೈನೋಸ್, ಅಂಕಪಟ್ಟಿಯಲ್ಲಿ ಡೆಲ್ಲಿ ತಂಡದ ಜೊತೆಗೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದೆ. ಅತ್ತ, ಮ್ಯಾಜಿಷಿಯನ್ಸ್‌ಗೆ ಇದು ಸತತ ಏಳನೇ ಸೋಲಾಗಿದೆ.
ಪಂದ್ಯದ ಮೊದಲ ನಿಮಿಷದಲ್ಲೇ ಸಂದೀಪ್ ಸಿಂಗ್ ಅವರು ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಮುಂಬೈ ತಂಡಕ್ಕೆ ಗೋಲು ಗಳಿಸಿಕೊಟ್ಟರು. ಆದರೆ, 10ನೇ ನಿಮಿಷದಲ್ಲಿ ತಮಗೆ ಒದಗಿದ್ದ ಪೆನಾಲ್ಟಿ ಕಾರ್ನರ್ ಅನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮುಂಬೈ ಎಡವಿತು. ನಂತರ, ಪಂದ್ಯದ 14ನೇ ಹಾಗೂ 16ನೇ ನಿಮಿಷದಲ್ಲಿ ಮುಂಬೈ ತಂಡದ ಪರವಾಗಿ ಎರಡು ಗೋಲುಗಳು ದಾಖಲಾದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.