ಕ್ರೀಡೆ

'ಜಗಳವಾಡಿದರೆ ಅದು ಗೌರವಕೊಟ್ಟ ಹಾಗೆ'

'ಜಗಳವಾಡಿದರೆ ಅದು ಗೌರವಕೊಟ್ಟ ಹಾಗೆ'
Published On :

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಕ್ರಿಕೆಟ್ ಪಂದ್ಯಗಳು ನಡೆದ ಸಂದರ್ಭಗಳಲ್ಲಿ ಈ ಹಿಂದೆ ಹಲವಾರು ಬಾರಿ ಉಭಯ ತಂಡಗಳ ಆಟಗಾರರು ಕಿತ್ತಾಡಿದ ಘಟನೆಗಳು ಹಲವಾರು ಇವೆ. ಆದರೆ, ಈ ರೀತಿಯ ಬೆಳವಣಿಗೆಗಳು ಎದುರಾಳಿ ತಂಡದ ಆಟಗಾರರನ್ನು ಗೌರವಿಸುವ ಮತ್ತೊಂದು ನಡೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.
'ಎರಡು ಬಲಿಷ್ಠ ತಂಡಗಳು ಮೈದಾನದಲ್ಲಿ ಮುಖಾಮುಖಿಯಾದಾಗ, ಎರಡೂ ತಂಡಗಳ ನಡುವೆ ಕಿತ್ತಾಟ ನಡೆದರೆ ಅದು ಒಂದು ತಂಡದ ಆಟಗಾರರು, ಮತ್ತೊಂದು ತಂಡದ ಆಟಗಾರರ ಮೇಲೆ ಗೌರವ ತೋರಿಸಿದಂತ'ಎಂದು ಹೇಳಿರುವ ಗಿಲ್, 'ಸಮಬಲದ ತಂಡಗಳ ನಡುವೆ ಪಂದ್ಯ ನಡೆಯುವಾಗ ಉಭಯ ತಂಡಗಳ ಆಟಗಾರರು ಸಾಕಷ್ಟು ಒತ್ತಡಕ್ಕೊಳಗಾಗಿರುತ್ತಾರೆ. ಅಂಥಾ ಸಂದರ್ಭಗಳಲ್ಲಿ ತಮ್ಮ ಅಸಹನೆ, ಸಿಟ್ಟುಗಳನ್ನು ಕಿಡಿನುಡಿಗಳ ಮೂಲಕ ಹೊರಹಾಕುತ್ತಾರೆ. ಸಮಬಲದ ತಂಡಗಳ ಪಂದ್ಯಗಳಲ್ಲಿ ಮಾತ್ರ ಇಂಥ ನಡವಳಿಕೆ ನೋಡಬಹುದು' ಎಂದು ಅವರು ತಿಳಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಈ ಹಿಂದೆ ನಡೆದ ಕೆಲವು ಪಂದ್ಯಗಳ ಸಂದರ್ಭಗಳಲ್ಲಿ ಆಟಗಾರರ ನಡುವೆ ಜಗಳ ಉಂಟಾಗಿದ್ದನ್ನು ಸ್ಮರಿಸಿ, ಗಿಲ್‌ಕ್ರಿಸ್ಟ್ ಈ ಮಾತುಗಳನ್ನು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.